ಕಮಲ ಪಡೆಯಿಂದ ಸೇವಾ ಸಂಕಲ್ಪ

ಸ್ವಚ್ಛತಾ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ
ಸಕಲೇಶಪುರ ಮಂಡಲ ಬಿಜೆಪಿಯಿಂದ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೆರೆ ಆವರಣದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು. ರಾಮಚಂದ್ರು, ಹೆತ್ತೂರು ದೇವರಾಜ್, ರಾಜಕುಮಾರ್, ಮಧು, ಸುದೀಶ್, ಸುಬೇಂದ್ರ ನಾಯ್ಡು, ಸುಬ್ಬು ಕೊಪ್ಪಳ, ಲೋಕೇಶ್ ಇತರರು ಇದ್ದರು.
ಸಕಲೇಶಪುರ ಮಂಡಲ ಬಿಜೆಪಿಯಿಂದ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೆರೆ ಆವರಣದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು. ರಾಮಚಂದ್ರು, ಹೆತ್ತೂರು ದೇವರಾಜ್, ರಾಜಕುಮಾರ್, ಮಧು, ಸುದೀಶ್, ಸುಬೇಂದ್ರ ನಾಯ್ಡು, ಸುಬ್ಬು ಕೊಪ್ಪಳ, ಲೋಕೇಶ್ ಇತರರು ಇದ್ದರು.
Published on: 

ಸಕಲೇಶಪುರ: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಸ್ಮರಿಸುವ ಅಂಗವಾಗಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಸಕಲೇಶಪುರ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೆರೆ ಆವರಣದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸಾರ್ವಜನಿಕ ಸೇವೆಯ 25 ವರ್ಷಗಳ ಅಂಗವಾಗಿ ಪಕ್ಷದ ವತಿಯಿಂದ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರಡಿ ವಿವಿಧ ಸಮಾಜಮುಖಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಕಲೇಶಪುರದಲ್ಲಿಯೂ ವಾಕಿಂಗ್‌ಗೆ ಬರುವ ಸಾರ್ವಜನಿಕರಿಗೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಅಭಿಯಾನದ ಭಾಗವಾಗಿ ಕೆರೆ ಆವರಣ ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಧರ್ಮಣ್ಣ, ಚಂದ್ರಣ್ಣ ಹಾಗೂ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ರಾಮಚಂದ್ರು, ಹೆತ್ತೂರು ದೇವರಾಜ್, ರಾಜಕುಮಾರ್, ಮಧು, ಸುದೀಶ್, ಸುಬೇಂದ್ರ ನಾಯ್ಡು, ಸುಬ್ಬು ಕೊಪ್ಪಳ, ಲೋಕೇಶ್ ಇತರರು ಇದ್ದರು.

4ಎಸ್ಕೆಪಿಪಿ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net