ಜಾಜೂರು ಹೊನ್ನಾಲದಮ್ಮ ರಥೋತ್ಸವ ಸಂಪನ್ನ

 ಜಾಜೂರಿನ ಹೊನ್ನಾಲದಮ್ಮ ಹಾಗೂ ಅಮ್ಮಯ್ಯಜ್ಜಿ ದೇವಿ, ವೀರಭದ್ರೇಶ್ವರ, ಧೂತರಾಯ ಸ್ವಾಮಿ ಹಾಗೂ ಚಿಕ್ಕಮ್ಮ ದೇವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಜಾಜೂರಿನ ಹೊನ್ನಾಲದಮ್ಮ ಹಾಗೂ ಅಮ್ಮಯ್ಯಜ್ಜಿ ದೇವಿ, ವೀರಭದ್ರೇಶ್ವರ, ಧೂತರಾಯ ಸ್ವಾಮಿ ಹಾಗೂ ಚಿಕ್ಕಮ್ಮ ದೇವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • Jajur Honnaladamma
ಅರಸೀಕೆರೆ ಗ್ರಾಮಂತರ: ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಹೊನ್ನಾಲದಮ್ಮ ಹಾಗೂ ಅಮ್ಮಯ್ಯಜ್ಜಿ ದೇವಿ, ವೀರಭದ್ರೇಶ್ವರ, ಧೂತರಾಯ ಸ್ವಾಮಿ ಹಾಗೂ ಚಿಕ್ಕಮ್ಮ ದೇವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ವೀರಭದ್ರೇಶ್ವರ ಸ್ವಾಮಿ, ಹೊಸಪಟ್ಟಣದ ಧೂತರಾಯ ಸ್ವಾಮಿ ದೇವರ ರಥಕ್ಕೆ ಪೂಜೆ ಸಲ್ಲಿಸಲಾಯಿತು. ರಥದ ಗಾಲಿಗಳಿಗೆ ಈಡುಗಾಯಿ ಸಮರ್ಪಿಸಿದ ಭಕ್ತರು ಹರ್ಷೋದ್ಗಾರದ ನಡುವ ರಥಗಳನ್ನು ಎಳೆದು ಪುನೀತರಾದರು.
ಭಕ್ತರು ತಮ್ಮ ಕೋರಿಕೆಗಳು ಈಡೇರಿಸುವಂತೆ ಭಕ್ತಿಯಿಂದ ರಥಕ್ಕೆ ಹಣ್ಣು ದವನ ಎಸೆದರು. ರಥೋತ್ಸವದ ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿ, ಹುತ್ತದಮ್ಮ, ಗಂಗಮ್ಮ, ಚಿಕ್ಕಮ್ಮ, ದುರ್ಗಮ್ಮ, ಪುರದಮ್ಮ ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿದವು.
ಏ.5ರಿಂದ 9 ರವರೆಗೆ ಜರುಗಿದ ಜಾತ್ರಾ ಮಹೋತ್ಸವದ ಪ್ರಯುಕ್ತ ಇಡಿ ಗ್ರಾಮವನ್ನು ವಿಶೇಷ ವಿದ್ಯುತ್ ದೀಪಗಳು ಮತ್ತು ಹಸಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಜನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ತೀರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net