ಸಂಸದ ಶ್ರೇಯಸ್ ಎಂ.ಪಟೇಲ್ ಸೇರಿದಂತೆ ಸ್ಥಳೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದ್ದು ಆಳ್ವಾಸ್‌ನ ಪ್ರತಿಭಾನ್ವಿತ 350 ವಿದ್ಯಾರ್ಥಿ ಕಲಾವಿದರು ಹಲವು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸಾಂಸ್ಕೃತಿಕ ವೈಭವದ ವೇಳೆ ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ, ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡಾನ್ಸ್, ಗುಜರಾತಿನ ಗರ್ಬಾ ಮತ್ತು ದಾಂಡಿಯ, ಮಲ್ಲಕಂಬ, ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ, ಪುರಲಿಯ ಸಿಂಹ ನೃತ್ಯ, ಯಕ್ಷಗಾನ, ಬೊಂಬೆ ವಿನೋದಾವಳಿ ಪ್ರದರ್ಶನ ನೀಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.