ಚಿಂತನಾ ಶಕ್ತಿ ವೃದ್ಧಿಗೆ ಚೆಸ್ ಸಹಕಾರಿ

ಬೇಲೂರು ಪಟ್ಟಣದ ಮೌಂಟ್‌ಫೋರ್ಡ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಚೆಸ್ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ರೇಖಾ ಪ್ರಕಾಶ್, ಜಗದೀಶ್, ಮೆಹಬೂಬ್, ಮನ್ನಖಾನ್, ರವೀಂದ್ರ ಕುಮಾರ್, ಜೆ.ಡಿ.ಮಂಜುನಾಥ್, ಸಂತೋಷ್, ಹರೀಶ್, ವೆಂಕಟೇಶ್, ಕಾಂತರಾಜು, ಶರತ್ ಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.
ಬೇಲೂರು ಪಟ್ಟಣದ ಮೌಂಟ್‌ಫೋರ್ಡ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಚೆಸ್ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ರೇಖಾ ಪ್ರಕಾಶ್, ಜಗದೀಶ್, ಮೆಹಬೂಬ್, ಮನ್ನಖಾನ್, ರವೀಂದ್ರ ಕುಮಾರ್, ಜೆ.ಡಿ.ಮಂಜುನಾಥ್, ಸಂತೋಷ್, ಹರೀಶ್, ವೆಂಕಟೇಶ್, ಕಾಂತರಾಜು, ಶರತ್ ಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಎಚ್.ಪ್ರಕಾಶ್ ಅಭಿಪ್ರಾಯ
  • ಬೇಲೂರಲ್ಲಿ ತಾಲೂಕುಮಟ್ಟದ ಕ್ರೀಡಾಕೂಟ

ಬೇಲೂರು:

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾಳ್ಮೆ, ಚಿಂತನಾ ಶಕ್ತಿ ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸುವಲ್ಲಿ ಚೆಸ್ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮೌಂಟ್‌ಫೋರ್ಡ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್.ಪ್ರಕಾಶ್ ಹೇಳಿದರು.

ಪಟ್ಟಣದ ಮೌಂಟ್ ಫೋರ್ಡ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕುಮಟ್ಟದ 14 ಹಾಗೂ 17 ವರ್ಷದೊಳಗಿನ ವಯೋಮಿತಿಯ ಚೆಸ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಚೆಸ್ ಮನರಂಜನೆಯ ಕ್ರೀಡೆಯಲ್ಲ. ಅದು ವಿದ್ಯಾರ್ಥಿಗಳ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುವ ತೆಗೆ ಯಾವುದೇ ವಿಚಾರವನ್ನು ಆಲೋಚಿಸಿ, ತಾಳ್ಮೆಯಿಂದ ನಿರ್ಧಾರ ಕೈಗೊಳ್ಳುವ ಗುಣ ಬೆಳೆಸುತ್ತದೆ. ವಿದ್ಯಾರ್ಥಿಗಳು ಪಠ್ಯಗಳ ಜತೆಯಲ್ಲೆ ಇಂತಹ ಬೌದ್ಧಿಕಮಟ್ಟ ಹೆಚ್ಚಿಸುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಕೊಳ್ಳಬೇಕು ಹಾಗೂ ಜಿಲ್ಲಾಮಟ್ಟದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ಈ ಚೆಸ್ ಕ್ರೀಡೆಯೂ ಮಕ್ಕಳನ್ನು ಮಾನಸಿಕ ಹಾಗೂ ತಾಳ್ಮೆಯನ್ನು ಮೂಡಿಸುವ ಪ್ರತೀಕವಾಗಿದೆ. ಮಕ್ಕಳು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ ಅವರಲ್ಲಿ ಬೌಧಿಕ ಮಟ್ಟ ಹೆಚ್ಚಿ ಅವರು ಎಲ್ಲ ಕ್ಷೇತ್ರದಲ್ಲೂ ಮುಂದೆ ಬರುವುದಕ್ಕೆ ಸ್ಫೂರ್ತಿಯಾಗುತ್ತದೆ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದರೆ ನಮ್ಮಲ್ಲೂ ಉತ್ತಮ ವ್ಯಕ್ತಿಗಳನ್ನು ರೂಪಿಸಲು ಸಾಧ್ಯ ಎಂದರು.
ಮೌಂಟ್ ಫೋರ್ಡ್ ಶಾಲೆ ಪ್ರಾಂಶುಪಾಲೆ ರೇಖಾ ಪ್ರಕಾಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಜಗದೀಶ್, ದೈಹಿಕ ಶಿಕ್ಷಕರಾದ ಮೆಹಬೂಬ್, ಮನ್ನಖಾನ್, ರವೀಂದ್ರ ಕುಮಾರ್, ಜೆ.ಡಿ.ಮಂಜುನಾಥ್, ಸಂತೋಷ್, ಹರೀಶ್, ವೆಂಕಟೇಶ್, ಕಾಂತರಾಜು, ಶರತ್ ಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net