95 ಎಕರೆ ಜಮೀನು ಖಾತೆ ಮಾಡಿಸಲು ಒತ್ತಾಯ

ಅಧಿಕಾರಿಗಳಿಗೆ ಹೊನ್ನಮಾರನಹಳ್ಳಿ ಗ್ರಾಮಸ್ಥರ ಮನವಿ
ಹೊನ್ನಮಾರನಹಳ್ಳಿ ಗ್ರಾಮದ ಸರ್ವೆ ನಂ.7ರಲ್ಲಿ ಮಂಜೂರಾಗಿರುವ 95 ಎಕರೆ ಜಮೀನಿನ ಖಾತೆ ಸಮಸ್ಯೆ ಕುರಿತು ತಹಸೀಲ್ದಾರ್ ಶಂಕರಪ್ಪ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ವಲಯ ಅರಣ್ಯಾಧಿಕಾರಿ ಜ್ಯೋತಿ, ಕಂದಾಯ ನಿರೀಕ್ಷಕ ಲತೇಶ್ ಕುಮಾರ್, ಸರ್ವೆ ಅಧಿಕಾರಿ ಷಡಕ್ಷರಿ, ರಂಗಸ್ವಾಮಿ, ವಿಠ್ಠಲ್ ಕುಮಾರ್, ಸುರೇಶ್, ವಿಜಯಕುಮಾರ್, ಮಧು, ಸಂಪತ್ ಕುಮಾರ್, ಮಹೇಶ್, ಬೋರೇಗೌಡ, ಕೃಷ್ಣಮೂರ್ತಿ ಮತ್ತಿತರರು ಇದ್ದರು.

Published on: 

ನುಗ್ಗೇಹಳ್ಳಿ: ಹೊನ್ನಮಾರನಹಳ್ಳಿ ಗ್ರಾಮದ ಸರ್ವೇ ನಂ.7ರಲ್ಲಿ ಮಂಜೂರಾಗಿರುವ 95 ಎಕರೆ ಜಮೀನನ್ನು ಅಳತೆ ಮಾಡಿಸಿ ಫಲಾನುಭವಿ ರೈತರ ಹೆಸರಿಗೆ ಖಾತೆ ಮಾಡಿಕೊಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಶಂಕರಪ್ಪ, ವಲಯ ಅರಣ್ಯಾಧಿಕಾರಿ ಜ್ಯೋತಿ ಅವರನ್ನು ಗುರುವಾರ ಒತ್ತಾಯಿಸಿದರು.

ಸರ್ವೇ ನಂ.95ರಲ್ಲಿ 5 ಎಕರೆ ಜಮೀನು ಆಶ್ರಯ ವಸತಿ ಯೋಜನೆಗೆ ಮಂಜೂರಾಗಿದ್ದು, ಫಲಾನುಭವಿಗಳಿಗೆ ಇದುವರೆಗೆ ಹಕ್ಕುಪತ್ರ ನೀಡಿಲ್ಲ. ಕೂಡಲೇ ಹಕ್ಕುಪತ್ರ ವಿತರಿಸುವಂತೆ ಮುಖಂಡರು ಮನವಿ ಮಾಡಿದರು. ಅಲ್ಲದೆ, ಸರ್ವೇ ನಂ.1ರಲ್ಲಿ ಬರುವ ರಾಯಸಮುದ್ರ ಕಾವಲು ಪ್ರದೇಶದ 60 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಮೀಸಲಿಡಲಾಗಿದ್ದು, ಸಂಬಂಧಿಸಿದ ಭೂಮಿಯನ್ನು ಇಲಾಖೆಗೆ ಹಸ್ತಾಂತರಿಸುವ ಮೂಲಕ ಹಲವು ವರ್ಷಗಳಿಂದ ಇರುವ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಶಂಕರಪ್ಪ ಮಾತನಾಡಿ, ಸರ್ವೇ ನಂ.7ರಲ್ಲಿ ಬರುವ 95 ಎಕರೆ ಜಮೀನನ್ನು ಕಾನೂನುಬದ್ಧವಾಗಿ ಅಳತೆ ಮಾಡಿಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಹ ಫಲಾನುಭವಿ ರೈತರಿಗೆ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಲಯ ಅರಣ್ಯಾಧಿಕಾರಿ ಜ್ಯೋತಿ, ಸರ್ವೆ ಅಧಿಕಾರಿ ಷಡಕ್ಷರಿ, ಕಂದಾಯ ನಿರೀಕ್ಷಕ ಲತೇಶ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ನಂದಕುಮಾರ್, ಮುಖಂಡರಾದ ಎಚ್.ಬಿ.ರಂಗಸ್ವಾಮಿ, ಎಚ್.ಎನ್.ಸುರೇಶ್, ವಿಠ್ಠಲ್ ಕುಮಾರ್, ವಿಜಯ ಕುಮಾರ್, ಎಚ್.ಎನ್.ಮಧು, ಸಂಪತ್ ಕುಮಾರ್, ಮಹೇಶ್, ಎಚ್.ಡಿ.ಕೃಷ್ಣಮೂರ್ತಿ, ಕಾಂತರಾಜ್, ಬೋರೇಗೌಡ, ಮರದ ವ್ಯಾಪಾರಿ ಶೇಖರ್, ರಂಗಸ್ವಾಮಿ, ಚಂದ್ರಭೋಷಣ್ ಸೇರಿದಂತೆ ಇತರರು ಇದ್ದರು.

ಫೋಟೋ ಸುದ್ದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net