ಕಾಮಗಾರಿ ಗುಣಮಟ್ಟ ಗಮನಿಸಲು ಜನರಿಗೆ ಶಾಸಕ ಅಮರೇಗೌಡ ಬಯ್ಯಪುರ ಮನವಿ

191221 Hanumasagara Run to the JJM pipeline
ಹನುಮಸಾಗರದಲ್ಲಿ ಜಲ ಜೀವನ ಮಿಷನ್ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
Published on

ಹನುಮಸಾಗರ: ಜೆಜೆಎಂ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವುದನ್ನು ಸ್ಥಳೀಯರೇ ಗಮನಹರಿಸಬೇಕೆಂದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಹಳೆಯ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಜಲ ಜೀವನ ಮೀಷನ್ ಯೋಜನೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಪ್ರಾಯೋಗಿಕವಾಗಿ ಕುಷ್ಟಗಿ ತಾಲೂಕಿನಲ್ಲಿ 30 ಹಾಗೂ ಯಲಬುರ್ಗಾ ತಾಲೂಕಿನ 50 ಗ್ರಾಮಗಳಿಗೆ ಶುದ್ಧ ನೀರನ್ನು ಒದಗಿಸಲಾಗುತ್ತದೆ. ಮನೆಗಳಿಗೆ ಪೈಪ್‌ಲೈನ್ ಅಳವಡಿಸುವಾಗ ಪೈಪ್‌ನ ಗುಣಮಟ್ಟ ಪರಿಶೀಲಿಸಲು ಗುತ್ತಿಗೆದಾರರು ಜೋಡಣೆಯ ಪೈಪ್ ತುಂಡನ್ನು ಗ್ರಾಪಂನಲ್ಲಿ ತಪ್ಪದೇ ಇಡಬೇಕು. ಗುಣಮಟ್ಟದ ಕಾಮಗಾರಿಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net