ಕಲಿಕೆಗೆ ಪೂರಕ ವಾತಾವರಣ ಕಲ್ಪಿಸೋಣ

Untitled design(15)
Published on

ಹನುಮಸಾಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಲು ಸಾರ್ವಜನಿಕ ಸಹಕಾರ ಅವಶ್ಯ ಎಂದು ಮುಖ್ಯಶಿಕ್ಷಕ ಶಂಕ್ರಪ್ಪ ರಾಠೋಡ ಹೇಳಿದರು.

ಸಮೀಪದ ಅಡವಿಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾರ್ವಜನಿಕರು ನೀಡಿದ ವಿವಿಧ ಸಾಮಗ್ರಿಗಳನ್ನು ಬುಧವಾರ ಸ್ವೀಕರಿಸಿ ಮಾತನಾಡಿದರು. ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನ ಉದ್ಯಮಿ ಚಂದ್ರಶೇಖರ ಗುರುವಿನಮಠ ಹಾಗೂ ಶಿಕ್ಷಕ ರುದ್ರಸ್ವಾಮಿ ಗುರುವಿನಮಠ 20 ಸಾವಿರ ರೂ. ಮೌಲ್ಯದ ನಾಲ್ಕು ಟೇಬಲ್, 10 ಕುರ್ಚಿ, ಎರಡು ಜಮಖಾನ, ಬಸವರಾಜ ಮಾಲಿಪಾಟೀಲ್ ಅವರು 6 ಸಾವಿರ ರೂ. ಮೌಲ್ಯದ ಒಂದು ಅಲ್ಮೇರಾ, ಸಂಗಪ್ಪ ಹಡಪದ ಒಂದು ಸಾವಿರ ರೂ. ಮೌಲ್ಯದ ಒಂದು ಜಮಖಾನ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದರು.

ಎಸ್ಡಿಎಂಸಿ ಅಧ್ಯಕ್ಷೆ ಸುನೀತಾ ಸತ್ಯಪ್ಪ ಹಿರೇಮನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಸದಸ್ಯ ಶರಣಪ್ಪ ಮಾದರ, ಶಿಕ್ಷಕರಾದ ಪೂರ್ಣಿಮಾ ಹಿರೇಮಠ, ಚಾಮುಂಡೇಶ್ವರಿ, ಉಮಾಪತಿ, ಮೌನೇಶ, ರೇಖಾಬಾಯಿ, ರೇಣುಕಾ, ಲಕ್ಷ್ಮೀ, ಸಂಗಮ್ಮ, ಮಾಲಾ, ಶೈಲಜಾ, ಕವಿತಾ, ಮೈಲಾರಪ್ಪ, ವಾಯುಪುತ್ರ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net