

ಹಗರಿಬೊಮ್ಮನಹಳ್ಳಿ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ ಮಂಗಳ ವಾರ ತಮಟೆ ಚಳವಳಿ ಮತ್ತು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿತು.
ಡಾ.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಮಾತನಾಡಿ, ಸದಾಶಿವ ಆಯೋಗ ವರದಿ ವಸ್ತು ನಿಷ್ಠೆಯಾಗಿದ್ದರೂ ಜಾರಿ ಮಾಡುವಲ್ಲಿ ಸರ್ಕಾರಗಳ ನಿರ್ಲಕ್ಷ್ಯದಿಂದ ಮಾದಿಗ ಸಮುದಾಯ ಸಂವಿಧಾನಬದ್ಧ ಹಕ್ಕು ಪಡೆಯುವಲ್ಲಿ ವಂಚಿತರಾಗಿದೆ. 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ನ್ಯಾಯ ಮಾತ್ರ ಸಿಕ್ಕಿಲ್ಲ. ಶಿಕ್ಷಣ, ಉದ್ಯೋಗಕ್ಕಾಗಿ ಮುಂದಿನ ಪೀಳಿಗೆಗೆ ಸೌಲಭ್ಯ ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಕ್ಕಪಕ್ಕದಲ್ಲಿರುವವರೇ ಒಳಮೀಸಲಾತಿ ಸೌಲಭ್ಯ ವಿಚಾರದಲ್ಲಿ ಕಿವಿಕಡಿಯುತ್ತಿದ್ದಾರೆ. ಅಲ್ಲದೆ ಸಚಿವ ಎಚ್.ಕೆ.ಪಾಟೀಲ್ ಒಳಮೀಸಲಾತಿ ವಿರೋಧಿಸುವವರ ವೇದಿಕೆಯಲ್ಲಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ವೈ. ಮರಿಯಪ್ಪ, ಎಚ್. ದುರುಗಪ್ಪ, ಬಿ.ಜಿ.ಹಳ್ಳಿ ಎ.ಮಹೇಶ್, ಎಂ. ಕೆ.ಮಹೇಶ್ವರ, ಎಚ್.ಪ್ರಭಾಕರ, ಪಿ. ಯಮನೂರಪ್ಪ, ಬೆಣಕಲ್ ಪ್ರಕಾಶ್, ಪೂಜಾರ್ ಸಿದ್ದಪ್ಪ, ಒ.ಮೇಘರಾಜ್, ಯು. ಬುಳ್ಳಪ್ಪ, ಟಿ.ಅರ್ಜುನ್, ಎ.ರಮೇಶ್, ದೇವೇಂದ್ರ, ಯು.ಓಮೇಶ್, ಎಚ್.ಆರ್.ರಾಜಾ, ಪಿ.ರಮೇಶ್, ಭರಮ್ಮಪ್ಪ, ಡಿ.ಬಸವರಾಜ, ಎಸ್. ದುರುಗಪ್ಪ, ಉಮಾಪತಿ, ರವಿ, ಎಚ್.ಲಿಂಗರಾಜ್, ಸಿ. ಮೈಲಪ್ಪ, ನಾಗರಾಜ್ ಕಲ್ಲಳ್ಳಿ, ಎ.ಎಚ್. ದುರುಗಪ್ಪ ಇತರರಿದ್ದರು.