ಎಚ್.ಗಣಪತಿ ಆರ್ಯ ಈಡಿಗ ಸಂಘದ ಅಧ್ಯಕ್ಷ

20sor1
ಸೊರಬ ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಗಣಪತಿ ಹುಲ್ತಿಕೊಪ್ಪ ಅವರನ್ನು ನೂತನ ಪದಾಽಕಾರಿಗಳು ಅಭಿನಂದಿಸಿದರು.
Published on

ಸೊರಬ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆರ್ಯ ಈಡಿಗ ಸಂಘದಿAದ ಸೋಮವಾರ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಎಚ್.ಗಣಪತಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ನಿರ್ದೇಶಕರನ್ನು ಮುಂದುವರಿಸಿ ಕಾರ್ಯಕಾರಿ ಸಮಿತಿಯನ್ನು ಬದಲಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ನಾಗರಾಜ ಚಿಕ್ಕಸವಿ, ಎಂ.ಡಿ.ಉಮೇಶ(ಉಪಾಧ್ಯಕ್ಷ), ಎಂ.ಡಿ.ಶೇಖರ್ ತವನಂದಿ(ಪ್ರಧಾನ ಕಾರ್ಯದರ್ಶಿ), ಆರ್.ಎಸ್. ಜಗದೀಶ್ ಕೊಡಕಣಿ(ಸಹಕಾರ್ಯದರ್ಶಿ), ಜಿ.ಡಿ.ನಾಯ್ಕ್ ಹಳೇ ಸೊರಬ(ಖಜಾಂಚಿ), ಕೆ.ಅಜ್ಜಪ್ಪ, ಕೆ.ಮಂಜುನಾಥ, ಬಿ. ಹನುಮಂತಪ್ಪ, ಪರುಶುರಾಮ ಸಣ್ಣಬೈಲ್, ವೈ.ಜಿ.ಪಟ್ಟಸ್ವಾಮಿ, ಭರತ್ ರಾಜ್ ತಾಳಗೊಪ್ಪ, ಡಾಕಪ್ಪ ಪಾಣಿ, ಗುರುಮೂರ್ತಿ ಓಟೂರು, ಲಿಂಗೇಶ್, ಕೆ.ನಾಗರಾಜ, ರಾಜು ಮಳಲಗದ್ದೆ, ಎಸ್.ಆರ್ ರಾಮಪ್ಪ(ನಿರ್ದೇಶಕರು) ಆಯ್ಕೆ ಮಾಡಲಾಗಿದೆ. ಇನ್ನೂ ಮೂವರು ನಿರ್ದೇಶಕರ ನೇಮಕಾತಿ ಬಾಕಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net