ಗುಂಡಾಪುರದ ಬೆಟ್ಟದರಸಮ್ಮ ಜಾತ್ರೆಗೆ ಚಾಲನೆ

 ಬೆಟ್ಟದ ಅರಸಮ್ಮನನ್ನು ವಿಶೇಷವಾಗಿ ಅಲಂಕರಿಸಿರುವುದು.
ಬೆಟ್ಟದ ಅರಸಮ್ಮನನ್ನು ವಿಶೇಷವಾಗಿ ಅಲಂಕರಿಸಿರುವುದು.
Published on

ಹಲಗೂರು: ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆಗೆ  ಚಾಲನೆ ದೊರೆತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರ ಗುಡ್ಡರು ಹೆಬ್ಬಾರಗಳಿಗೆ ಪೂಜೆ ಸಲ್ಲಿಸಿ ಹೂ ಹೊಂಬಾಳೆ ಪ್ರಸಾದ ಪಡೆದರು. ಬಳಿಕ ಆಯ್ದ ಕೆಲವು ಮನೆಗಳಿಗೆ ಹೋಗಿ ಪೂಜೆ ಸ್ವೀಕರಿಸಿ ಮರಳಿ ಕರಗದ ಮನೆ ಬಳಿ ಬಂದು ಮಹಾ ಮಂಗಳಾರತಿ ನೆರವೇರಿಸಿದರು.

ನಂತರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀಬೆಟ್ಟದರಸಮ್ಮನವರ ದೇವಸ್ಥಾನಕ್ಕೆ ದೇವರ ಕರಗವನ್ನು ಹೊತ್ತು ತರಲಾಯಿತು. ಸಂಜೆ 4 ಗಂಟೆ ನಂತರ ದೇವರ ಉತ್ಸವವನ್ನು ಮೆರವಣಿಗೆ ಮೂಲಕ ಮೂಲ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ರಾತ್ರಿ ರಾತ್ರಿ 10 ಗಂಟೆ ವೇಳೆಗೆ ಕರಗವನ್ನು ಮೆರವಣಿಗೆ ಮಾಡಲಾಯಿತು. ಬೆಟ್ಟದ ಅರಸಮ್ಮನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ದಂಡಾಧಿಕಾರಿ ಎಸ್.ವಿ.ಲೋಕೇಶ್, ತಟ್ಟೆ ಪೂಜೆ ಹಾಗೂ ದೊಡ್ಡ ಜಾತ್ರೆ ನಡೆಯಲಿದ್ದು, ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು. ಯಾವುದೇ ತೊಂದರೆ ಆಗದಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಮಾರ್ಗದರ್ಶನದಲ್ಲಿ ಎಸ್‌ಐ ಲೋಕೇಶ್ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net