ಖಾಸಗಿ ವ್ಯಕ್ತಿಗಳ ಸಾಲ ವಸೂಲಿ ಕಿರುಕುಳ ತಾಳಲಾರದೆ ಸರ್ಕಾರಿ ಶಾಲಾ ಶಿಕ್ಷಕಿ ಸಾವಿಗೆ ಶರಣು! Govt Teacher

Govt Teacher
Published on

Govt Teacher : ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್​ ಹಾವಳಿಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಲ ವಸೂಲಿ ಏಜೆಂಟ್​ಗಳ ಕಿರುಕುಳವನ್ನು ತಡೆಯಲಾರದೇ ಅನೇಕ ಮಂದಿ ಊರುಗಳನ್ನೇ ಖಾಲಿ ಮಾಡಿಕೊಂಡು ಹೋಗುತ್ತಿರುವ ಘಟನೆಗಳು ವರದಿಯಾಗಿವೆ. ಇದೆಲ್ಲದರ ನಡುವೆ ಮೈಕ್ರೋ ಫೈನಾನ್ಸ್​ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಕೂಗು ಗಟ್ಟಿಯಾಗಿ ಕೇಳಿಬರುತ್ತಿದೆ. ಸರ್ಕಾರವೂ ಕೂಡ ಮೈಕ್ರೋ ಫೈನಾನ್ಸ್​ಗೆ ಕಡಿವಾಣ ಹಾಕಲು ಮುಂದಾಗಿದೆ.

ಮೈಕ್ರೋ ಫೈನಾನ್ಸ್​ ವಿರುದ್ಧ ಜನರು ತೀವ್ರ ಆಕ್ರೋಶ ಹೊರಹಾಕುತ್ತಿರುವ ನಡುವೆಯೇ ಖಾಸಗಿ ವ್ಯಕ್ತಿಗಳ ಸಾಲ ವಸೂಲಿ ಕಿರುಕುಳ ತಾಳಲಾರದೆ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ವರದಿಯಾಗಿದೆ.

ದಾವಣಗೆರೆಯ ಹೊನ್ನಾಳಿಯಲ್ಲಿ ಭಾನುವಾರ ರಾತ್ರಿ ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪುಷ್ಪಲತಾ (46) ಎಂದು ಗುರುತಿಸಲಾಗಿದೆ. ಮೃತದೇಹ ಇನ್ನೂ ಸಿಕ್ಕಿಲ್ಲ ಮತ್ತು ಇದುವರೆಗೂ ಪ್ರಕರಣ ಸಹ ದಾಖಲಾಗಿಲ್ಲ.

ಪುಷ್ಪಲತಾ ಅವರು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ತುಮ್ಮಿನಕಟ್ಟೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಪತಿ ಹಾಲೇಶ್ ಕೂಡ ಶಿಕ್ಷಕರಾಗಿದ್ದು ರಾಣೇಬೆನ್ನೂರು ತಾಲೂಕು ಕಿರಿಗೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net