ಅನ್ನಭಾಗ್ಯದ ಅಕ್ಕಿಯ ಜೊತೆಗೆ 'ಇಂದಿರಾ ಕಿಟ್‌' ವಿತರಣೆಗೆ ಅಧಿಕೃತ ಆದೇಶ: indira kitನಲ್ಲಿ ಏನೆಲ್ಲಾ ಇರಲಿದೆ?

indira kit
Published on

ಬೆಂಗಳೂರು:  ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಕಿಟ್‌ (indira kit ) ವಿತರಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಟ್ವೀಟ್​​ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

ಡಿ ಕೆ ಶಿವಕುಮಾರ್ ಅವರ​​ ಟ್ವೀಟ್​​ನಲ್ಲಿ ಏನಿದೆ?: 

ಹಸಿವುಮುಕ್ತ ಕರ್ನಾಟಕ! ಹಸಿವುಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯ ಉದ್ದೇಶವಾಗಿರುವುದರಿಂದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಕಿಟ್‌ ವಿತರಿಸಲು ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅನ್ನಭಾಗ್ಯದ 10 ಕೆಜಿಯ ಅಕ್ಕಿಯ ಬದಲು ಇನ್ಮುಂದೆ 5 ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ 5 ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಿದ್ದೇವೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದೇ ನಮ್ಮ ಸರ್ಕಾರದ ಕಾಳಜಿಯಾಗಿದೆ.

1) ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್ ವಿತರಣೆ

2) 10 ಕೆ.ಜಿ ಅಕ್ಕಿ ಬದಲು 5 ಕೆ.ಜಿ ಅಕ್ಕಿ ಹಾಗೂ ಇಂದಿರಾ ಕಿಟ್‌ನಲ್ಲಿ 1ಕೆ.ಜಿ ತೊಗರಿಬೇಳೆ 1 ಕೆ.ಜಿ ಹೆಸರುಕಾಳು, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ, 1ಕೆ.ಜಿ ಉಪ್ಪು ಇರಲಿದೆ.

3) ಒಬ್ಬರು ಅಥವಾ ಇಬ್ಬರು ಇರುವ ಕುಟುಂಬಕ್ಕೆ ತಲಾ ಅರ್ಧ ಕೆ.ಜಿಯಂತೆ 2.5 ಕೆ.ಜಿ ಕಿಟ್ ವಿತರಣೆ ಮಾಡಲಾಗುತ್ತದೆ.

4) ಮೂವರು ಅಥವಾ ನಾಲ್ವರು ಇರುವ ಕುಟುಂಬಕ್ಕೆ 5 ಕೆ.ಜಿ ತೂಕದ ಕಿಟ್ ವಿತರಣೆ ಐವರು ಅಥವಾ ಅದಕ್ಕಿಂತ ಹೆಚ್ಚು ಜನರು ಇರುವ ಕುಟುಂಬಕ್ಕೆ ತಲಾ 1.5 ಕೆ.ಜಿಯಂತೆ 7.5 ಕೆ.ಜಿಯ ಆಹಾರ ಕಿಟ್ ವಿತರಣೆ ಇರುತ್ತದೆ.

ಇಂದಿರಾ ಆಹಾರ ಕಿಟ್‌ನ ಪರಿಚಯವು ಕರ್ನಾಟಕದ ಆಹಾರ ಭದ್ರತೆಯ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಈ ಯೋಜನೆಯ ಮೂಲಕ, ಕಡಿಮೆ ಆದಾಯದ ಕುಟುಂಬಗಳಿಗೆ ಕೇವಲ ಅಕ್ಕಿಯನ್ನಷ್ಟೇ ಅಲ್ಲದೆ, ಇತರ ಅಗತ್ಯ ಆಹಾರ ವಸ್ತುಗಳನ್ನು ಒದಗಿಸುವ ಮೂಲಕ ಅವರ ಆಹಾರದ ಗುಣಮಟ್ಟವನ್ನು ಸುಧಾರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net