ಲಕ್ಷ್ಮೀವೆಂಕಟೇಶ್ವರ ದೇಗುಲ ದ್ವಾರಬಾಗಿಲು ಉದ್ಘಾಟನೆ

Chariot Festival
ಗಂಗಾವತಿ ತಾಲೂಕಿನ ವೆಂಕಟಗಿರಿಯ ಐತಿಹಾಸಿಕ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದ ದ್ವಾರಬಾಗಿಲು ದಾಸನಾಳ ಬಳಿ ಭಾನುವಾರ ಉದ್ಘಾಟನೆಗೊಂಡಿತು.
Published on

ಗಂಗಾವತಿ: ತಾಲೂಕಿನ ವೆಂಕಟಗಿರಿಯ ಐತಿಹಾಸಿಕ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದ ದ್ವಾರಬಾಗಿಲನ್ನು ದಾಸನಾಳ ಬಳಿ ಭಾನುವಾರ ಉದ್ಘಾಟಿಸಲಾಯಿತು.

ಅಭಿನವ ತಿರುಪತಿ ಎಂದು ಖ್ಯಾತಿ ಪಡೆದಿರುವ ದೇವಾಲಯ ಪ್ರವೇಶಿಸುವ ಗಂಗಾವತಿ-ರಾಯಚೂರು ರಸ್ತೆಯ ದಾಸನಾಳದಲ್ಲಿ ಭಕ್ತರ ನೆರವಿನಡಿ ದ್ವಾರ ಬಾಗಿಲು ನಿರ್ಮಿಸಿದ್ದು, ವಿವಿಧ ಸಮುದಾಯದ ಮುಖಂಡರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು. ದೇವಾಲಯದ ಇತಿಹಾಸ ಮತ್ತು ದ್ವಾರಬಾಗಿಲು ನಿರ್ಮಾಣ ಕುರಿತು ಎಪಿಎಂಸಿ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ್ ಮಾಹಿತಿ ನೀಡಿದರು.

ರಾಜವಂಶಸ್ಥೆ ಲಲಿತಾರಾಣಿ ರಾಯಲು, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿ ನೆಕ್ಕಂಟಿ ಸೂರಿಬಾಬು, ಮಲ್ಲಿಕಾರ್ಜುನ ನಾಗಪ್ಪ ಸೇರಿ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ದೇವಾಲಯದ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಏ.2ರಂದು ಜರುಗಲಿದೆ. ಮಾ.30ರಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಮೂರ್ತಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, ಶ್ರೀ ಕಲ್ಯಾಣೋತ್ಸವ, ರಥಾಂಗ ಹೋಮ, ನೈವೇದ್ಯ, ಮಹಾಮಂಗಳಾರತಿ ಮತ್ತು ಸಂಜೆ ಸರ್ವಾಲಂಕೃತ ರಥೋತ್ಸವ ಜರುಗಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net