ಗಾಂ ಆತ್ಮಕತೆ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ


ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗಾಂ ತಾತನ ಸನ್ನಿಯಲ್ಲಿ’ ಕೃತಿಯನ್ನು ಕರ್ನಾಟಕ ಗಾಂ ಸ್ಮಾರಕ ನಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಬಿಡುಗಡೆ ಮಾಡಿದರು.  ಪ್ರೊ.ಎನ್.ಕೆ. ಲೋಕನಾಥ್, ಕೃಪಾಕರ, ರವಿ ಕೋಟಿ ಹಾಗೂ ಇತರರು ಇದ್ದರು.
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗಾಂ ತಾತನ ಸನ್ನಿಯಲ್ಲಿ’ ಕೃತಿಯನ್ನು ಕರ್ನಾಟಕ ಗಾಂ ಸ್ಮಾರಕ ನಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಬಿಡುಗಡೆ ಮಾಡಿದರು. ಪ್ರೊ.ಎನ್.ಕೆ. ಲೋಕನಾಥ್, ಕೃಪಾಕರ, ರವಿ ಕೋಟಿ ಹಾಗೂ ಇತರರು ಇದ್ದರು.RAVI
Published on: 

ಮೈಸೂರು: ಸತ್ಯ, ಅಹಿಂಸೆ ಮತ್ತು ಸರಳತೆಯನ್ನು ಬದುಕಿನ ತತ್ವವಾಗಿಸಿಕೊಂಡಿದ್ದ ಮಹಾತ್ಮ ಗಾಂೀಜಿ ಅವರ ಜೀವನ ಇಂದಿನ ಯುವಪೀಳಿಗೆಗೆ ಹಲವು ಪಾಠಗಳನ್ನು ಕಲಿಸುತ್ತದೆ. ಅವರ ಆತ್ಮಕತೆ ಹಾಗೂ ಸಾಹಿತ್ಯದ ಅಧ್ಯಯನ ಬದುಕನ್ನು ನೋಡುವ ದೃಷ್ಟಿಯನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ಕರ್ನಾಟಕ ಗಾಂ ಸ್ಮಾರಕ ನಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಅಭಿಪ್ರಾಯಪಟ್ಟರು.

ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಂದೋಲನ ದೈನಿಕ, ಮೈಸೂರು ವಿಶ್ವವಿದ್ಯಾಲಯ, ಗಾಂ ಅಧ್ಯಯನ ಕೇಂದ್ರ, ಕರ್ನಾಟಕ ಗಾಂ ಸ್ಮಾರಕ ನಿ ವತಿಯಿಂದ ಶನಿವಾರ ಆಯೋಜಿಸಿದ್ದ ‘ನನ್ನ ಸತ್ಯಾನ್ವೇಷಣೆ’ ಆತ್ಮಕತೆಯ ಶತಮಾನೋತ್ಸವದ ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಮಂಥನ ಮತ್ತು ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಗಾಂೀಜಿ ಅವರ ಮಹತ್ವವನ್ನು ಅರಿಯಬೇಕಾದರೆ ಅವರ ಬದುಕು ಮತ್ತು ಬರಹಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಅವರ ವಿಚಾರಗಳನ್ನು ಪ್ರಶ್ನಿಸುವ ಸ್ವಾತಂತ್ರವಿದೆ. ಆದರೆ, ವಿಷಯವನ್ನು ತಿಳಿದುಕೊಳ್ಳದೆ ಟೀಕಿಸುವುದು ಸರಿಯಾದ ವಿಧಾನವಲ್ಲ. ತಮ್ಮ ತಪ್ಪುಗಳನ್ನೂ ಮುಚ್ಚಿಡದೆ ಆತ್ಮಕತೆಯಲ್ಲಿ ದಾಖಲಿಸಿದ ಅವರ ಪ್ರಾಮಾಣಿಕತೆ, ತಪ್ಪು ಒಪ್ಪಿಕೊಳ್ಳುವ ಧೈರ್ಯ ಮತ್ತು ಸರಳ ಜೀವನ ಯುವಜನರಿಗೆ ಅನುಕರಣೀಯ. ದ್ವೇಷಕ್ಕೆ ಪ್ರೀತಿಯಿಂದ ಉತ್ತರಿಸುವುದು, ಸಮಾಜದ ಅಂಚಿನಲ್ಲಿರುವವರನ್ನು ಮುಖ್ಯವಾಹಿನಿಗೆ ತರುವುದು, ಪ್ರತಿಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುವುದು ಗಾಂೀಜಿ ಅವರ ವ್ಯಕ್ತಿತ್ವದ ವಿಶೇಷತೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮಾತನಾಡಿ, ಗಾಂೀಜಿ ಅವರ ಚಿಂತನೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲಿಯೂ ಗ್ರಾಮ ಸ್ವರಾಜ್ಯ ಸೇರಿದಂತೆ ಅವರ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಸುಮಾರು 140ಕ್ಕೂ ಹೆಚ್ಚು ದೇಶಗಳಲ್ಲಿ ಅವರ ಪ್ರತಿಮೆಗಳಿರುವುದು ಜಾಗತಿಕ ಮಟ್ಟದಲ್ಲಿ ಅವರಿಗಿರುವ ಗೌರವಕ್ಕೆ ಸಾಕ್ಷಿ. ಪರಿಸರದ ಕುರಿತು ಅವರು ವ್ಯಕ್ತಪಡಿಸಿದ್ದ ಕಾಳಜಿಯೂ ಇಂದಿನ ಕಾಲಘಟ್ಟದಲ್ಲಿ ಮಹತ್ವದ್ದಾಗಿದೆ ಎಂದರು.

ಆಂದೋಲನ ಸಂಪಾದಕ ರವಿ ಕೋಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಾಂೀಜಿ ಅವರ ಚಿಂತನೆಗಳ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ 57 ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಸಲಾಯಿತು. ವಿಜೇತರಾದ 260 ವಿದ್ಯಾರ್ಥಿಗಳ ಪ್ರಬಂಧಗಳ ಆಯ್ದ ಭಾಗಗಳನ್ನು ಸೇರಿಸಿ ಗಾಂ ತಾತನ ಸನ್ನಿಯಲ್ಲಿ ಕೃತಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಷ್ಟೇ ಮಾನವೀಯ ವೌಲ್ಯಗಳಿಗೂ ಮಹತ್ವ ನೀಡಬೇಕು. ಸತ್ಯ, ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಣುತೆಯ ಗಾಂೀಜಿ ಅವರ ಸಂದೇಶಗಳು ಭವಿಷ್ಯದಲ್ಲಿಯೂ ಪ್ರಸ್ತುತವಾಗಿರಲಿವೆ. ವಿದ್ಯಾರ್ಥಿಗಳು ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಂದೊಲನ ಹಿರಿಯ ಉಪ ಸಂಪಾದಕ ರವಿಚಂದ್ರ ಚಿಕ್ಕಕೆಂಪಿಹುಂಡಿ, ಗಾಂ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನರೇಂದ್ರ ಕುಮಾರ್ ಹಾಗೂ ಇತರರು ಇದ್ದರು.

ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗಾಂ ತಾತನ ಸನ್ನಿಯಲ್ಲಿ’ ಕೃತಿಯನ್ನು ಕರ್ನಾಟಕ ಗಾಂ ಸ್ಮಾರಕ ನಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಬಿಡುಗಡೆ ಮಾಡಿದರು. ಪ್ರೊ.ಎನ್.ಕೆ. ಲೋಕನಾಥ್, ಕೃಪಾಕರ, ರವಿ ಕೋಟಿ ಹಾಗೂ ಇತರರು ಇದ್ದರು.