

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟ ಸೇರಿ ಅವರ 79 ವರ್ಷ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಹಾಗೂ ಜೀವನ ವೃತ್ತಾಂತವನ್ನು ಸಾದರಪಡಿಸುವ ‘ಮೋಹನದಾಸ್ ಟು ಮಹಾತ್ಮ’ ನೂರು ಭಾವಚಿತ್ರಗಳ ಪ್ರದರ್ಶನವನ್ನು ನಗರದ ಸುವರ್ಣ ವಿಧಾನ ಸೌಧದ ಆವರಣದಲ್ಲಿ ಆಯೋಜಿಸಲಾಗಿದೆ. ಇಷ್ಟೆ ಅಲ್ಲದೆ 1924ರಲ್ಲಿ ಜರುಗಿದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ವಿಶೇಷ ಭಾವಚಿತ್ರಗಳ ಜತೆಗೆ ಮಕ್ಕಳೊಂದಿಗೆ ಮಹಾತ್ಮ ಇರುವ 50 ಭಾವಚಿತ್ರಗಳನ್ನೂ ಸಹ ವಿಶೇಷವಾಗಿ ಆಯೋಜಿಸ ಲಾಗುತ್ತದೆ. ವಿಜಯಪುರದ ನೇತಾಜಿ ಗಾಂಧಿ, ಮಹಾದೇವ ಬಡಿಗೇರ, ನಗರದ ಬಾಳೂ ಗಸ್ತಿ ಅವರು ಈ ಭಾವಚಿತ್ರಗಳ ಪ್ರದರ್ಶನ ನಿರ್ವಹಿಸಿದ್ದಾರೆ.