ಕೃಷಿಯಲ್ಲಿ ಮೌಲ್ಯವರ್ಧನೆಗೆ ಒತ್ತು, ನಬಾರ್ಡನಿಂದ ಜಿ¯್ಲೆಗೆ ನೆರವು ಜÁಗ ಹಂಚಿಕೆಗೆ ಜಿ¯್ಲÁಡಳಿತಕ್ಕೆ ಕೋರಿಕೆ, ಜವಳಗೇರಾದಲ್ಲಿ ತರಬೇತಿ ಕೇಂದ್ರ ಸ್ಥಾಪನೆ

DC RAICHU
NITHISH
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಕೃಷಿಯಲ್ಲಿ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸೃಷ್ಟಿಸುವುದು, ರೈತರಿಗೆ ವಿವಿಧ ರೀತಿಯಲ್ಲಿ ತರಬೇತಿ ನೀಡುವ ಉದ್ದೇಶದಿಂದ ನಬಾರ್ಡ್ನ ಮಹತ್ವಾಕಾಂಕ್ಷೆ ಜಿ¯್ಲÉಗಳಲ್ಲಿ ತರಬೇತಿ ಕೇಂದ್ರ ಸ್ಥಾಪನೆಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ರಾಯಚೂರು ಹಾಗೂ ಯಾದಗಿರಿ ಜಿ¯್ಲÁಡಳಿತಗಳಿಗೆ ಪತ್ರ ಬರೆದು ಜÁಗ ಗುರುತಿಸಲು ಪತ್ರ ಬರೆದಿದೆ.

ಕೇಂದ್ರ ಸರ್ಕಾರವು ನೀತಿ ಆಯೋಗದ ಅಡು ರಾಯಚೂರು ಹಾಗೂ ಯಾದಗಿರಿ ಜಿ¯್ಲÉಗಳನ್ನು ಹಿಂದುಳಿದ ಜಿ¯್ಲÉಗಳೆಂದು ಗುರುತಿಸಿದ್ದು, ಈ ಜಿ¯್ಲÉಗಳಲ್ಲಿ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಗೆ ಪೂರಕ ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈಗ ಎರಡೂ ಜಿ¯್ಲÉಗಳಲ್ಲಿ ರೈತರಿಗೆ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ.

ತರಬೇತಿ ಕೇಂದ್ರ-

ನಬಾರ್ಡ್ ತನ್ನ ಅಭಿವೃದ್ಧಿಯ ಉಪಕ್ರಮಗಳ ಭಾಗವಾಗಿ ದೇಶದಾದ್ಯಂತ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (ಎ-ï‌ಪಿಒ) ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕಗಳು ಮತ್ತು ಸಾಮರ್ಥ್ಯ ನಿರ್ಮಾಣವನ್ನು ಉತ್ತೇಜಿಸಲು ನಿರ್ಧಾರ ಮಾಡಲಾಗಿದ್ದು, ಇದರಿಂದ ರೈತರಿಗೆ ಕೃಷಿ ಸಂಸ್ಕರಣೆಗೆ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದರೆ,ರೈತರು, ಎ-ï‌ಪಿಒಗಳಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವುದು ಮತ್ತು ಕೃಷಿ ಸಂಸ್ಕರಣೆಗೆ ಸಾಮಾನ್ಯ ಸೌಲಭ್ಯವನ್ನು ಸೃಷ್ಟಿಸುವುದು. ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸುವುದು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದಾಯ ಮಟ್ಟವನ್ನು ಸುಧಾರಿಸುತ್ತದೆ. ಜತೆಗೆ ಸುಸ್ಥಿರ ಕೃಷಿ-ವ್ಯವಹಾರ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಎ-ï‌ಪಿಓ ಮತ್ತು ಎಸ್‌ಎಚ್‌ಓಎಸ್‌ಗಳನ್ನು ಬೆಂಬಲಿಸಲಾಗುವುದು. ಇದರ ಜತೆಗೆ ರೈತರು ಬೆಳೆಯುವ ಬೆಳೆಗೆ ನೀರಿನ ಲಭ್ಯತೆ, ಮೂರು ಹಂತದಲ್ಲಿ ವಿದ್ಯುತï ಸಂಪರ್ಕದ ಲಭ್ಯತೆ ಕುರಿತು ತರಬೇತಿ ನೀಡಲು ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತದೆ.

ಅನುದಾನ ಎಷ್ಟು-

ನಿರ್ಮಲಾ ಸೀತಾರಾಮನï ಅವರು ಎರಡೂ ಜಿ¯್ಲÉಗಳಿಗೆ ತಲಾ ೫೦ ಲಕ್ಷ ರೂ. ತಮ್ಮ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ಕೊಡಮಾಡಿz್ದÁರೆ.

ಎಲ್ಲಿ ಕೇಂದ್ರ ಸ್ಥಾಪನೆ

ರಾಯಚೂರು ಜಿ¯್ಲÉಯ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಈ ತರಬೇತಿ ಕೇಂದ್ರಕ್ಕೆ ೧ ಎಕರೆ ಜÁಗ ಹಂಚಿಕೆ ಮಾಡಲು ಜಿ¯್ಲÁಽಕಾರಿಗೆ ನಬಾರ್ಡï‌ನ ಪ್ರಧಾನ ವ್ಯವಸ್ಥಾಪಕರ ಕಚೇರಿ ಪತ್ರ ಬರೆದಿದೆ. ಅದೇ ರೀತಿ ಯಾದಗಿರಿ ಜಿ¯್ಲÉಯ ಬಡ್ಡೆಪಲ್ಲಿ ಗ್ರಾಮದಲ್ಲಿ ಸುಮಾರು ೩೦ ಎಕರೆ ಸರ್ಕಾರಿ ಸ್ಥಳದಲ್ಲಿ ೦೧ ಎಕರೆ ಜÁಗ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತುಂಗಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ನೀರಾವರಿಯಾಗಿರುವ ಎರಡೂ ಮಹತ್ವಾಕಾಂಕ್ಷೆಯ ಜಿ¯್ಲÉಗಳಲ್ಲಿ ರೈತರಿಗೆ ನಬಾಡ್Àðನ ತರಬೇತಿ ಕೇಂದ್ರ ಸ್ಥಾಪನೆಯಾದಲ್ಲಿ ಸಾಕಷ್ಟು ಅನುಕೂಲ ಆಗಲಿದೆï. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಆಲೋಚನೆ ರೈತರಲ್ಲಿ ಬಿತ್ತಲು ಪೂರಕವಾದ ಪರಿಸರ ನಿರ್ಮಾಣವಾಗಲಿದೆ ಎಂಬ ಮಾತು ಕೇಳಿಬಂದಿದೆ.

--------

ಕೋಟ್

-------

ಇತ್ತಿಚ್ಚಿಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನï ಅವರು ಜಿಲ್ಲೆಯಲ್ಲಿ ರೈತ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ೫೦ ಲಕ್ಷ ರೂ. ತಮ್ಮ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ನೀಡಿದ್ದು,ಜತೆಗೆ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿ ಈ ತರಬೇತಿ ಕೇಂದ್ರಕ್ಕೆ ೧ ಎಕರೆ ಜÁಗ ಹಂಚಿಕೆ ಮಾಡಲು ನಬಾರ್ಡï‌ನ ಪ್ರಧಾನ ವ್ಯವಸ್ಥಾಪಕರ ಕಚೇರಿ ಪತ್ರ ಬಂದಿದೆ ಸ್ಥಳ ವಿಕ್ಷೇಣೆ ಮಾಡಿ ಮಾಹಿತಿ ನೀಡುವೆ.

ನಿತೀಶ್ ಕೆ.ಜಿಲ್ಲಾಽಕಾರಿ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net