10ಕ್ಕೆ ಮಹಾನಗರ ಪಾಲಿಕೆ ನೌಕರರಿಂದ ತುರ್ತು ಸಭೆ: 7ನೇ ವೇತನ ಆಯೋಗ ಜಾರಿಗೆ ಒತ್ತಾಯ

bbmp
Published on

ಬೆಂಗಳೂರು:ಏಳನೇ ವೇತನ ಆಯೋಗ ಜಾರಿಗೆ ತರಲು ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಕುರಿತು ಚರ್ಚಿಸಲು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಏ.10ರಂದು ತುರ್ತು ಸಭೆ ಕರೆದಿದೆ.

ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ನಗರದ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸೇರಿ ಎಲ್ಲ ಖಾಯಂ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ಕೋರಿ ಸರ್ಕಾರಕ್ಕೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಸೇರಿ ವಿವಿಧ ಸಂಘಟನೆಗಳು ಒಟ್ಟುಗೂಡಿಸಿ ಆಡಳಿತ ಚಟುವಟಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಅರ್ನಿದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುವುದಕ್ಕೆ ಸಭೆ ತೀರ್ಮಾನಿಸಲಾಗುವುದು ಎಂದು ಸಂದ ಅಧ್ಯಕ್ಷ ಎ.ಅಮೃತ್​ರಾಜ್​ ಹೇಳಿದರು.

ನೌಕರರಿಗೆ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡದೆ ಆಯಾ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ಭರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. 2023ರ ಏಪ್ರಿಲ್​ನಿಂದ 2024ರ ಜುಲೈವರೆಗೆ ಪಾವತಿಸಬೇಕಿದ್ದ ಮಧ್ಯಂತರ ಪರಿಹಾರವನ್ನೂ ಕೂಡ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ.ಇತ್ತೀಚಿನ ವರ್ಷಗಳಲ್ಲಿ ಘನ ತ್ಯಾಜ್ಯ ಉದ್ಯಾನ ನಿರ್ವಹಣೆ, ಹೊರಗುತ್ತಿಗೆ ಸೇರಿ ಇತ್ಯಾದಿ ಮೂಲ ಸೌಕರ್ಯಗಳ ವೆಚ್ಚವೂ ಜಾಸ್ತಿಯಾಗಿದೆ. ಹೀಗಿರುವಾಗ, ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ಭರಿಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net