ಶಿವಮೊಗ್ಗದಲ್ಲಿ ಸಂಪನ್ನಗೊಂಡ ಮಕ್ಕಳ ದಸರಾ

Children's Dussehra
ಫ್ರೀಡಂಪಾರ್ಕ್‌ನಲ್ಲಿ ಮಕ್ಕಳ ದಸರಾ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಡ್ರಾಮಾ ಜೂನಿಯರ್ ಖ್ಯಾತಿಯ ಎಸ್.ರಿಧಿ ಹಾಗೂ ಸರಿಗಮಪ ಹಿನ್ನೆಲೆ ಗಾಯಕಿ ಆರ್. ನೇಹಾ ಉದ್ಘಾಟಿಸಿದರು.
Published on

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡೆ, ಕಲೆ, ಕೌಶಲ್ಯ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಫ್ರೀಡಂಪಾರ್ಕ್ ನ ವೇದಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಡ್ರಾಮಾ ಜೂನಿಯರ್ ಖ್ಯಾತಿಯ ಎಸ್.ರಿಧಿ ಹಾಗೂ ಸರಿಗಮಪ ಹಿನ್ನೆಲೆ ಗಾಯಕಿ ಆರ್. ನೇಹಾ ಉದ್ಘಾಟಿಸಿ ತಮ್ಮ ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮುಖಾಂತರ ನಾಗರಿಕರನ್ನು ರಂಜಿಸಿದರು.
ಮಕ್ಕಳ ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ಹಲವಾರು ಕ್ರೀಡೆ, ಕಲೆ, ಕೌಶಲ್ಯ, ಕರಾಟೆ, ಕೂಡೋ ಮಾರ್ಷಲ್ ಆರ್ಟ್ಸ್ ಸೇರಿ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿವಮೊಗ್ಗದ ಹತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 20ಕ್ಕೂ ಅಧಿಕ ಶಾಲೆಗಳಿಂದ ಆಗಮಿಸಿದ ಶಾಲಾ ಮಕ್ಕಳು ಸಾಂಸ್ಕೃತಿಕ ಕಲರವ ನೃತ್ಯಗಳನ್ನು ಪ್ರದರ್ಶಿಸಿದರು.
ವಿಶೇಷವಾಗಿ ಪ್ರಪ್ರಥಮ ಬಾರಿಗೆ ದಸರಾ ಕಾರ್ಯಕ್ರಮದ ಫ್ರೀಡಂಪಾರ್ಕ್‌ನ ವೇದಿಕೆ ಮೇಲೆ ನಗರದ ಕರಾಟೆಪಟುಗಳು ಸಾಹಸಮಯ ಕರಾಟೆ ಕಲೆ ಪ್ರಚುರಪಡಿಸಿದರು. ಕೊಡಗು ಜಿಲ್ಲೆಯಿಂದ ಆಗಮಿಸಿದ ಜಾದೂಗಾರ ವಿಕ್ರಂ ಶೆಟ್ಟಿ ಅವರು ತಮ್ಮ ಜಾದು ಕಲೆಯಿಂದ ಮಕ್ಕಳನ್ನು ಹಾಗೂ ನಾಗರಿಕರನ್ನು ರಂಜಿಸಿದರು. ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಎಂ.ಶಂಕರ್ ಆಗಮಿಸಿ ಶಿವಮೊಗ್ಗ ದಸರಾ ಉತ್ಸವವು ನಡೆದು ಬಂದ ಹಾದಿ ಮೆಲುಕು ಹಾಕಿ ಹಿತ ನುಡಿಗಳನ್ನು ನುಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಕ್ಕಳ ಸಾಂಸ್ಕೃತಿಕ ಕಲರವ ವೀಕ್ಷಿಸಿದರು. ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ, ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಸದಸ್ಯರಾದ ಸುನೀತಾ ಅಣ್ಣಪ್ಪ, ಎಚ್.ಸಿ.ಯೋಗೇಶ್, ಆರ್.ಸಿ.ನಾಯ್ಕ್, ಮಂಜುಳಾ ಶಿವಣ್ಣ, ಸುವರ್ಣಾ ಶಂಕರ್, ಯು.ಎಚ್.ವಿಶ್ವನಾಥ್, ಮಂಜುನಾಥ್ ,ರಾಜು, ಅನಿತಾ ರವಿಶಂಕರ್, ಆರತಿ ಆ.ಮ.ಪ್ರಕಾಶ್, ಸಂಗೀತಾ ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net