ಕೊಪ್ಪಳ‌ ಗ್ರಾಮೀಣ ಭಾಗದಲ್ಲಿ‌ ಜಾನುವಾರು ಕಳ್ಳತನ ಮಾಡುತ್ತಿದ್ದವರ ಬಂಧನ

IMG-20240108-WA0025
Published on

ಕೊಪ್ಪಳ: ತಾಲೂಕಿನ ವಿವಿಧೆಡೆ ಜಾನುವರು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕೊಪ್ಪಳದ‌ ಹಮಾಲರ‌ ಕಾಲನಿ ನಿವಾಸಿ ಖಾದರ್ ಸಾಬ್ ಸಿದ್ದಿ ಮತ್ತು ಕಾತರಕಿ ಗುಡ್ಲಾನೂರ ಗ್ರಾಮದ ಹಸನ್ ಪಾಷಾ ಬಂಧಿತರು.

ನಾಲ್ಕು ಜನುವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಬಂಧಿತರಿಂದ ಜಾನುವಾರು ಮಾರಾಟ ಮಾಡಿದ 2.50 ಲಕ್ಷ ರೂ. ಹಾಗೂ 3.50 ಲಕ್ಷ‌ ರೂ. ಮೌಲ್ಯದ ಒಂದು ಟಾಟಾ ಏಸ್ ವಾಹನ ವಶಕ್ಕೆ ಪಡೆಯಲಾಗಿದೆ.

ಗ್ರಾಮೀಣ ಠಾಣೆ ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐಗಳಾದ ಅಶೋಕ ಬೇವೂರ, ಹೀರಪ್ಪ, ಸಿಬ್ಬಂದಿ‌ ಮಹೇಶ‌ ಸಜ್ಜನ, ಚಂದಪ್ಪ, ಮಾರುತಿ ಇತರರ ತಂಡ ಪ್ರಕರ‌ಣ‌‌ ಭೇದಿಸಿದೆ.

ತಂಡಕ್ಕೆ ಎಸ್ಪಿ ಯಶೋದ ವಂಟಗೋಡಿ ಬಹುಮಾನ ಘೋಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net