ಕೊಪ್ಪಳ: ನಗರದಲ್ಲಿ 10 ದಿನ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಂಗಳವಾರ ತೆರೆ ಬಿದ್ದಿದೆ. 1.50 ಕೋಟಿ ರೂ. ವಹಿವಾಟಿನ ಮೂಲಕ ಯಶಸ್ವಿಯಾಯಿತು.
ಆ.24ರಂದು ಮೇಳಕ್ಕೆ ಚಾಲನೆ ನೀಡಲಾಗಿತ್ತು. 52 ಮಳಿಗೆಗಳು, 11ಖಾದಿ ಸಂಘ-ಸಂಸ್ಥೆಗಳು, 6 ಸಿಲ್ಕ್ ಸಂಘ-&ಸಂಸ್ಥೆಗಳು ಹಾಗೂ 35 ಗ್ರಾಮೋದ್ಯೋಗ ಉತ್ಪನ್ನಗಳ ಮಳಿಗೆಗಳಲ್ಲಿ ವ್ಯಾಪಾರ ನಡೆಯಿತು. ದೇಶದ ವಿವಿಧ ರಾಜ್ಯಗಳು ಮತ್ತು ರಾಜ್ಯದಲ್ಲಿ ಪಿಎಂಇಜಿಪಿ, ಸಿಎಂಇಜಿಪಿ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು, ಖಾದಿ ಆಯೋಗದಿಂದ ಮನ್ನಣೆ, ಸಹಾಯಧನ ಪಡೆದ ಸಂ&ಸಂಸ್ತೆಗಳು ಭಾಗಿಯಾದವು. 66.88 ಲಕ್ಷ ರೂ. ಖಾದಿ ಮತ್ತು ಸಿಲ್ಕ್, ರೆಡಿಮೆಡ ಗಾಮೆಂರ್ಟ್ಸ್, ಆಯುವೇರ್ದಿಕ ವಸ್ತುಗಳು, ಚನ್ನಪಟ್ಟಣದ ಗೊಂಬೆ, ನೈಸರ್ಗಿಕವಾದ ಚಾಪೆಗಳು ಮತ್ತು ಚಪ್ಪಲಿ ಸೇರಿ 83.74 ಲಕ್ಷ ರೂ. ವಹಿವಾಟು ನಡೆಯಿತು.
30 ಸಾವಿರ ಜನ ಭೇಟಿ ನೀಡಿದ್ದು, ನೆರೆ ಜಿಲ್ಲೆಯ ಜನರು ಭೇಟಿ ನೀಡಿರುವುದು ವಿಶೇಷ. 13 ವರ್ಷಗಳ ಬಳಿಕ ಕೊಪ್ಪಳದಲ್ಲಿ ಆಯೋಜಿಸಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಮೇಳದಲ್ಲಿ ಭಾಗಿಯಾದ ಪ್ರದರ್ಶಕರಿಗೆ ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರು, ಲೀಡ್ ಬ್ಯಾಂಕ್ ಮ್ಯಾನೇಜರ್ ಕಾರ್ಪಣಿ ಮಾರುತಿ, ಎಸ್.ಬಿ.ಐ. ಆರ್ಸೆಟಿ ನಿರ್ದೇಶಕ ರಾಯೇಶ್ವರ ಪೈ ಪ್ರಮಾಣ ಪತ್ರ ವಿತರಿಸಿದರು. ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಜಿಲ್ಲಾಧಿಕಾರಿ ಕೆ.ವಿರೇಶ್ ಇತರರಿದ್ದರು.