

ಕೊಪ್ಪಳ: ಲಾಂತರ ಜನರ ಬಾಳಿಗೆ ಬೆಳಕಾಗಿರುವ ಕರ್ನಾಟಕ ರೆಡ್ಡಿ ಜನಸಂ ಶತಮಾನದ ಸಂಭ್ರಮದಲ್ಲಿದೆ. ಬೆಂಗಳೂರಿನಲ್ಲಿ ಸೆ.24ರಂದು ಶತಮಾನೋತ್ಸವ ಕಾರ್ಯಕ್ರಮವಿದ್ದು ಲಾಂತರ ಜನ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಹರಿಹರ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿಗಳು ತಿಳಿಸಿದರು.
ನಗರದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಸಂ ಹುಟ್ಟಿರುವುದೇ ರೆಡ್ಡಿ ಸಮುದಾಯದ ಕಲ್ಯಾಣಕ್ಕಾಗಿ. ನೂರು ವರ್ಷದಲ್ಲಿ ಲಾಂತರ ಜನರ ಬಾಳಿಗೆ ಸಂ ಬೆಳಕಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಕ್ರಾಂತಿ ಮಾಡಿದೆ. ಬೆಂಗಳೂರಿನಲ್ಲಿ ವಸತಿ ನಿಲಯ ತೆರೆದು ವಿದ್ಯಾರ್ಥಿಗಳಿಗೆ ನೆರವಾಗಿದೆ. ಜತೆಗೆ ಹಲವು ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.
ರೆಡ್ಡಿಜನಸಂಘವನ್ನು ರಾಜ್ಯವ್ಯಾಪ್ತಿ ವಿಸ್ತರಣೆ ಮಾಡಬೇಕಿದೆ. ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಣ ಸಂಸ್ಥೆ ತೆರೆಯಲು ಯೋಜನೆ ರೂಪಿಸಬೇಕಿದೆ. ನೂರು ವರ್ಷದ ಸವಿನೆನಪಿಗಾಗಿ ಈ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಚ್ಚಿನ ಜನರು ಸಮಾವೇಶಕ್ಕೆ ಆಗಮಿಸಬೇಕು. ಕೊಪ್ಪಳದಲ್ಲೂ ಸಮುದಾಯ ಬಲಿಷ್ಠವಾಗಿದೆ. ಕಲ್ಯಾಣ ಕಾರ್ಯ ಮಾಡುತ್ತಿದೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ಮನವಿ ಮಾಡಿದರು.
ಸಂದ ರಾಜ್ಯ ಉಪಾಧ್ಯಕ್ಷ ಲಕ್ಷ$್ಮರಡ್ಡಿ, ನಿರ್ದೇಶಕರಾದ ಬಾಬುರೆಡ್ಡಿ, ರಾಜಾರೆಡ್ಡಿ, ಎಂ.ಸಿ.ಪ್ರಭಾಕರರೆಡ್ಡಿ, ಎಂ.ಕೃಷ್ಣಾರಡ್ಡಿ, ಸಮುದಾಯ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಆರ್.ಪಿ.ರಡ್ಡಿ, ಆನಂದರಡ್ಡಿ, ಪ್ರಭು ಹೆಬ್ಬಾಳ, ವೆಂಕನಗೌಡ, ಮನೋಹರಗೌಡ, ಎಸ್.ಬಿ.ನಾಗರಳ್ಳಿ, ನವೋದಯ ವಿರುಪಣ್ಣ, ದೇವಪ್ಪ ಅರಿಕೇರಿ, ಹನುಮರಡ್ಡಿ ಹಂಗನಕಟ್ಟಿ, ವೆಂಕಾರಡ್ಡಿ ವಕೀಲ ಇತರರಿದ್ದರು.
====