ಮುಕ್ತ ವಿವಿ ವಿವಿಧ ಕೋರ್ಸ್​ ಪ್ರವೇಶ ಪ್ರಾರಂಭ

Published on

ಕೊಪ್ಪಳ: ರಾಜ್ಯ ಮುಕ್ತ ವಿವಿ 2023&-24ನೇ (ಜುಲೈ ಆವೃತ್ತಿಯ) ಸಾಲಿನ ವಿವಿಧ ಕೋರ್ಸಗಳಿಗೆ ಪ್ರವೇಶ ಆರಂಭವಾಗಿವೆ ಎಂದು ಕೊಪ್ಪಳ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಥಮ ಬಿಎ, ಬಿಕಾಂ, ಬಿಎಲ್​ಐಎಸ್ಸಿ, ಬಿಎಸ್ಸಿ, ಬಿಬಿಎ, ಬಿಸಿಎ, ಬಿ.ಎಸ್​.ಡಬ್ಲ್ಯೂ ಹಾಗೂ ಪ್ರಥಮ ಎಂಎ (ಕನ್ನಡ, ಇಂಗ್ಲೀಷ್​, ಹಿಂದಿ, ಉರ್ದು, ಇತಿಹಾಸ, ಪ್ರಾಚಿನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಎಂ.ಕಾಂ., ಎಂ.ಎಸ್​.ಡಬ್ಲ್ಯೂ, ವಿವಿಧ ಎಂಎಸ್ಸಿ ಕೋರ್ಸ ಗಳಾದ ಜೀವಶಾಸ್ತ್ರ, ರಸಾಯನಶಾಸ್ತ್ರ, ಮಾನವಶಾಸ್ತ್ರ, ಸಸ್ಯಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ವೈದ್ಯಕಿಯ ಪೋಷಣೆ ಮತ್ತು ಆಹಾರ ಪದ್ಧತಿ, ಆಹಾರ ಮತ್ತು ಪೋಷಣೆ, ಜೀವ ರಸಾಯನಶಾಸ್ತ್ರ, ಭೂಗೋಳಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಸೂಕ್ಷ$್ಮ ಜೀವವಿಜ್ಞಾನ, ಗಣಿತ, ಭೌತಶಾಸ್ತ್ರ ವಿಷಯಗಳಿಗೆ ತರಗತಿಗಳು ಆರಂಭವಾಗಿವೆ.

ಅರ್ಜಿ ಸಲ್ಲಿಕೆಗೆ ನ.15ಕೊನೆಯ ದಿನ. ಮಾಹಿತಿಗೆ ಮೊ.ಸಂ: 9916783555, 9743582257, 9071179986 ಹಾಗೂ ವಿವಿಯ ವೈಬ್​ಸೈಟ್​ www.ksoumysuru.ac.in ಸಂಪರ್ಕಿಸುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net