

ಕೊಪ್ಪಳ: ರಾಜ್ಯ ವಕೀಲರ ಪರಿಷತ್, ಜಿಲ್ಲಾ ವಕೀಲರ ಸಂದಿಂದ ಜೂ.29ರಿಂದ ಜುಲೈ 3ವರೆಗೆ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಹೇಳಿದರು.
ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಕಾರ್ಯಾಗಾರ ನಡೆಯಲಿದೆ. ಶನಿವಾರ ಬೆಳಗ್ಗೆ 10.30ಕ್ಕೆ ಕಾರ್ಯಗಾರ ಉದ್ಘಾಟನೆ ಜರುಗಲಿದೆ. ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಉದ್ಘಾಟಿಸಲಿದ್ದಾರೆ. ರಾಜ್ಯ ವಕೀಲರ ಪರಿಷತ್ ಸದಸ್ಯ ವಿ.ಡಿ.ಕಾಮರಡ್ಡಿ, ಎಸ್.ಎಸ್.ಮಿಠ್ಠಲಕೋಡ, ಎಸ್.ಆಸೀಫ್ ಅಲಿ, ಮಾಜಿ ಸದಸ್ಯೆ ಸಂಧ್ಯಾ ಮಾದಿನೂರು ವಿಶೇಷ ಆಹ್ವಾನಿತರಾಗಿರಲಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ದಿನ ಒಂದು ಗೋಷ್ಠಿ, ಪ್ರತಿದಿನ ಎರಡು ಗೋಷ್ಠಿಗಳು ನಡೆಯಲಿವೆ. ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಸ್.ಶಂಕ್ರಪ್ಪ, ಹಿರಿಯ ಕಾನೂನು ಅಭಿಯೋಜಕ ಬಿ.ಎಸ್.ಪಾಟೀಲ್, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ವೆಂಕಟಸುದರ್ಶನ, ಎಸ್.ಬಿ.ವಸ್ತ್ರದಮಠ, ವಕೀಲರಾದ ವಿ.ಎನ್.ಪಾಟೀಲ್, ಎಸ್.ಎಚ್.ಹನುಕುಂಟಿ, ಸಿ.ಎಂ.ಗುರುಬಸವರಾಜ ಉಪನ್ಯಾಸ ನೀಡುವರು. ಜುಲೈ 3ರ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಸಂಗಣ್ಣ ಕರಡಿ ಭಾಗವಹಿಸುವರು. ಕಾರ್ಯಗಾರದಲ್ಲಿ 300ರಿಂದ 350 ಜನ ಯುವ ವಕೀಲರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್.ಹಾದಿಮನಿ, ವಕೀಲ ಬಿ.ಎಚ್.ಮೇಲಸಕ್ರಿ ಇದ್ದರು.