ಶಿಕ್ಷಣದೊಂದಿಗೆ ಕೌಶಲ ಅಗತ್ಯ, ಸಾಹಿತಿ ಕಾ.ತ.ಚಿಕ್ಕಣ್ಣ ಹೇಳಿಕೆ

district koppal koppal university opening day celebration
Published on

ಕೊಪ್ಪಳ: ನಾವು ಎಷ್ಟೇ ಕಲಿತರು ಕೌಶಲ ಬೇಕು. ಇದರಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿವಿಯಿಂದ ಬುಧವಾರ ಹಮ್ಮಿಕೊಂಡ ಎರಡನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳಿಯರಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ವಿಶ್ವವಿದ್ಯಾಲಯಗಳು ಬೇಕು. ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ, ಪೈಪೋಟಿ ಜತೆಗೆ ವಿದ್ಯಾರ್ಥಿಗಳ ಬದುಕು ಅರಳಿಸುವ ಶಿಕ್ಷಣ ಕೊಡಬೇಕು. ಕೊಪ್ಪಳ ಭಾಗ ಸಾಂಸತಿಕವಾಗಿ ಶ್ರೀಮಂತವಾಗಿದೆ. ರಾಜಕೀಯ ಇರುವುದು ಸೇವೆಗಾಗಿ ಆದರೆ ಇಂದಿನ ದಿನಮಾನಗಳಲ್ಲಿ ಅದು ಹಿಂದೆ ಸರಿದು ಅಧಿಕಾರ ಮುಂದೆ ಬಂದಿದೆ. ಹೀಗಾದರೆ ಹಸಿ-ಹಸಿಯಾದ ತೀಮಾರ್ನಗಳಾಗುತ್ತವೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಆಗಬಾರದು. ಒಂದು ದೇಶದ ಅಭಿವೃದ್ಧಿಯಲ್ಲಿ ದ್ಧಿ ಅಲ್ಲಿಯ ಶಿಕ್ಷಣದ ಮೇಲೆ ನಿಂತಿರುತ್ತದೆ ಎಂದು ಹೇಳಿದರು.

ದಾವಣಗೆರೆ ವಿವಿ ಕುಲಪತಿ ಪ್ರೋ.ಬಿ.ಡಿ. ಕುಂಬಾರ ಮಾತನಾಡಿ, ವಿಶ್ವವಿದ್ಯಾಲಯ ಇರುವುದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೊಸ ವಿವಿ ಉಳಿಸಿಕೊಂಡು ಹೋಗುವುದು ಸಾಮಾನ್ಯ ಕೆಲಸ ಅಲ್ಲ. ಆದರೂ ಕಳೆದ 2 ವರ್ಷಗಳಿಂದ ಪ್ರೋ.ಬಿ.ಕೆ. ರವಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅವರ ಕಾಳಜಿ ತೋರಿಸುತ್ತದೆ. ಹಿಂದುಳಿದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅವರು ದೃಢ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ವಿವಿ ಕುಲಪತಿ ಪ್ರೊ.ಜಯಕರ ಎಸ್.ಎಂ.ಮಾತನಾಡಿ, ಈ ಭಾಗದ ಬೆಳವಣಿಗೆ ಹಾಗೂ ಪರಿವರ್ತನೆಗೆ ವಿಶ್ವವಿದ್ಯಾಲಯದ ಪಾತ್ರ ಬಹಳ ಮುಖ್ಯ. ನಮ್ಮ ದೇಶದಲ್ಲಿ ಯುವಕರು ಹೆಚ್ಚಾಗಿದ್ದಾರೆ. ಮೌಲ್ಯಾಧಾರಿತ ಶಿಕ್ಷಣ ನೀಡಿದಲ್ಲಿ ಒಳ್ಳೆ ಉದ್ಯೋಗ ಪಡೆಯುತ್ತಾರೆ. ಬೆಂಗಳೂರು ವಿವಿ ಸದಾ ನಿಮ್ಮೊಂದಿಗಿರಲಿದೆ ಎಂದು ಭರವಸೆ ನೀಡಿದರು.

ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಕಳೆದೆರಡು ವರ್ಷದಲ್ಲಿ ಹಲವು ಶೈಕ್ಷಣಿಕ ಕಾರ್ಯಚಟುವಟಿಕೆ ಮಾಡಿದ್ದೇವೆ. ಎಲ್ಲರೂ ಸಹಕರಿಸಿದ್ದಾರೆ. ಕೊಪ್ಪಳದಲ್ಲಿ ವಿವಿ ಆರಂಭವಾದ ನಂತರ ಹೆಣ್ಣು ಮಕ್ಕಳ ಕಲಿಕೆ ಹೆಚ್ಚಾಗಿದೆ. ಶಿಕ್ಷಣ ಬಲಪಡಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಹುಧರ್ಮ, ಸಂಸತಿ, ಭಾಷೆ ಪರಂಪರೆಯ ದೇಶ ನಮ್ಮದು. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಓದುವ ವಿಷಯದಲ್ಲಿ ಆಳವಾದ ಜ್ಞಾನ ಇದ್ದರೆ ನೇಮಕಾತಿ ಆದೇಶ ಪತ್ರ ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದ್ಮಶ್ರೀ ಪುರಸತ ತೊಗಲುಗೊಂಬೆ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿಭಾಗದಿಂದ ಹೊರತಂದ ಪ್ರಾಯೋಗಿಕ ಪತ್ರಿಕೆ, ಕೆಯುಕೆ ನ್ಯೂಸ್ ಲೋಗೋ ಬಿಡುಗಡೆ ಮಾಡಲಾಯಿತು. ವಿವಿಧ ವಿವಿ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ, ಪ್ರೊ.ನಾಗೇಶ ವಿ. ಬೆಟ್ಟಕೋಟೆ, ಪ್ರೊ.ಮುನಿರಾಜು ಎಂ., ಪ್ರೊ. ಸುರೇಶ ವಿ., ಕುಲಸಚಿವರಾದ ಎಸ್.ಎನ್. ರುದ್ರೇಶ, ಎನ್.ಎಂ.ಸಾಲಿ, ಕೆ.ವಿ.ಪ್ರಸಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net