ನೈಜ ಚುನಾವಣೆಗೆ 'ಮತಗಳ್ಳತನ' ಮಾರಕ

Congress
Published on

ವಿನಯಕುಮಾರ್​ ಸೊರಕೆ ಅನಿಸಿಕೆ

ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದಲ್ಲಿ ನಡೆಯುವ ಯಾವುದೇ ಚುನಾವಣೆ ನಡೆದರೂ ಅದು ದೋಷಮುಕ್ತವಾಗಿ ನಡೆಯಬೇಕು. ಅದು ನೈಜ ಚುನಾವಣೆ ಎನ್ನಬೇಕಾದರೆ ಮತಗಳ್ಳತನ ನಿಲ್ಲಬೇಕು ಎಂಬ ಜನರ ಭಾವನೆಗಳಿಗೆ ಆಸ್ಪದ ನೀಡಬೇಕು. ಚುನಾವಣಾ ಆಯೋಗದ ಜತೆಗೂಡಿ ಬಿಜೆಪಿ ನಡೆಸಿರುವ ಮತಗಳ್ಳತನ ನೈಜ ಚುನಾವಣೆಗಳಿಗೆ ಮಾರಕ. ಅದರ ವಿರುದ್ಧ ಕರ್ನಾಟಕದಲ್ಲಿ ಈಗಾಗಲೇ 70ರಿಂದ 80 ಲಕ್ಷ ಜನರ ಸಹಿ ಸಂಗ್ರಹಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್​ನ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್​ ಸೊರಕೆ ತಿಳಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಸಭೆಯಲ್ಲಿ ಮಾತನಾಡಿ, ಮತಗಳ್ಳತನವು ರಾಷ್ಟ್ರಮಟ್ಟದ ಗಂಭೀರ ವಿಚಾರವಾಗಿದೆ. ಸಹಿ ಸಂಗ್ರಹದ ಬಳಿಕ ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದರು.

ಕಾಂಗ್ರೆಸ್​ನ ಪ್ರಮುಖ ಅಭಿಯಾನ

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕಕುಮಾರ್​ ಕೊಡುವೂರು ಮಾತನಾಡಿ, ಪಕ್ಷ ಬಲಪಡಿಸದೆ ಚುನಾವಣೆ ಗೆಲ್ಲಲು ಅಸಾಧ್ಯ. ಕೇಂದ್ರ ಬಿಜೆಪಿ ಸರ್ಕಾರವು ಮತಗಳ್ಳತನದ ಧೋರಣೆ ನಿಲ್ಲಿಸದಿದ್ದಲ್ಲಿ ಚುನಾವಣೆ ನಡೆಸುವುದೂ ವ್ಯರ್ಥ. ಬಿಜೆಪಿಯ ಈ ಷಡ್ಯಂತ್ರ ಜನತೆಗೆ ತಿಳಿಸಲು ಸಹಿ ಸಂಗ್ರಹ ಅಭಿಯಾನ ಪ್ರಾಮುಖ್ಯತೆ ಹೊಂದಿದೆ ಎಂದರು.

ಸಾಧಕರಿಗೆ ಸನ್ಮಾನ

ಕರಾವಳಿ ಅಬಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎ. ಗಪೂರ್​, ರಾಜ್ಯ ಕೆಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ ಜತ್ತನ್ನ ಹಾಗೂ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸತ ಬಿಪಿನ್​ ಚಂದ್ರ ಪಾಲ್​ ನಕ್ರೆ ಅವರನ್ನು ಜಿಲ್ಲಾ ಕಾಂಗ್ರೆಸ್​ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಪ್ರಸಾದ್​ ರಾಜ್​ ಕಾಂಚನ್​, ದಿನೇಶ್​ ಹೆಗ್ಡೆ ಮೊಳಹಳ್ಳಿ, ಮಲ್ಲಾಡಿ ಶಿವರಾಂ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಕೃಷ್ನ ಶೆಟ್ಟಿ ಬಜಗೋಳಿ, ಹರೀಶ್​ ಕಿಣಿ, ದಿನಕರ ಹೇರೂರು, ನವೀನ್​ಚಂದ್ರ ಶೆಟ್ಟಿ, ಹಿರಿಯಣ್ಣ, ಶಬ್ಬೀರ್​ ಅಹ್ಮದ್​, ದೇವಕಿ ಸಣ್ಣಯ್ಯ, ಶಂಕರ್​ ಕುಂದರ್​, ವೈ. ಸುಕುಮಾರ್​, ರಮೇಶ್​ ಕಾಂಚನ್​, ರಾಘವೇಂದ್ರ ಶೆಟ್ಟಿ ಕರ್ಜೆ, ಶುಭದ ರಾವ್​ ಕಾರ್ಕಳ, ಪ್ರಖ್ಯಾತ್​ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಮಮತಾ ಶೆಟ್ಟಿ, ರೋಶನಿ ಒಲಿವೆರಾ, ಹರಿಪ್ರಸಾದ್​ ರೈ, ಉದ್ಯಾವರ ನಾಗೇಶಕುಮಾರ್​ ಇತರರು ಉಪಸ್ಥಿತರಿದ್ದರು.

ಸಹಕಾರಿ ಕಾಂಗ್ರೆಸ್​ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್​ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್​ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

ಕರ್ನಾಟಕ, ಮಹಾರಾಷ್ಟ್ರದ ನಂತರ ಹರಿಯಾಣದಲ್ಲೂ ಮತಗಳ್ಳತನದ ಆರೋಪ ಕೇಳಿ ಬಂದಿದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನದೊಂದಿಗೆ ಜನಜಾಗೃತಿ ಮೂಡಿಸುವುದೂ ಸಹ ಅತಿ ಮುಖ್ಯ. | ಕೆ.ಜಯಪ್ರಕಾಶ್​ ಹೆಗ್ಡೆ. ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net