ಹಿಂದು ಧರ್ಮ ನಾಶಗೊಳಿಸಲು ಧರ್ಮಸ್ಥಳದ ಮೇಲೆ ಆರೋಪ

New Katawe New
Published on

ಹುಬ್ಬಳ್ಳಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಬಿಜೆಪಿ ಯುವ ಮುಖಂಡ ವೆಂಕಟೇಶ ಕಾಟವೆ ನೇತೃತ್ವದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ವಿಗ್ರಹ, ಹುಬ್ಬಳ್ಳಿಯಲ್ಲಿ ನಿರ್ವಿುಸಲಾದ ರಾಷ್ಟ್ರಧ್ವಜದ ಪ್ರೇಮ್ ಹಾಗೂ ಸಸಿ ನೀಡಿ ಗುರುವಾರದಂದು ಅಭಿನಂದಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ, ಹಿಂದು ಧರ್ಮ, ನಂಬಿಕೆಗಳನ್ನು ನಾಶಮಾಡಬೇಕೆಂದು ಧರ್ಮಸ್ಥಳದ ಮೇಲೆ ಸುಳ್ಳು ಆರೋಪ, ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಕೈವಾಡವಿದೆ ಎಂದರು.

ಕಾರಣವಿಲ್ಲದೆ ಅಪವಾದ ಮಾಡುವುದು ಸರಿಯಲ್ಲ. ಧರ್ಮಸ್ಥಳದಲ್ಲಿ ಯಾವುದೇ ಅನ್ಯಾಯ, ದ್ರೋಹ, ವಂಚನೆ ನಡೆಯುವುದಿಲ್ಲ ಎಂದು ಹೇಳಿದರು.

ಇದುವರೆಗೆ 17 ಸ್ಥಳಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಷಡ್ಯಂತ್ರದ ಮೂಲಕ ಮತ್ತೊಂದು ಪುಣ್ಯಕ್ಷೇತ್ರದ ಮೇಲೂ ಸುಳ್ಳು ಆರೋಪ ಮಾಡುತ್ತಾರೆ ಎಂದರು.

ಇನ್ನಾದರೂ ನಾವೆಲ್ಲ ಜಾಗೃತರಾಗಿರಬೇಕು. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಬೇಕು. ಬಹಳ ತಡವಾಗಿ ಹಿಂದು ಸಮಾಜ ಹೋರಾಟಕ್ಕಿಳಿದಿದೆ. ಮೊದಲೇ ಹೋರಾಟ ಪ್ರಾರಂಭಿಸಿದ್ದರೆ ಇಷ್ಟು ದೀರ್ಘಕ್ಕೆ ಈ ಪ್ರಕರಣ ಹೋಗುತ್ತಿರಲಿಲ್ಲ ಎಂದರು.

ಮಾಜಿ ಶಾಸಕ ಅಶೋಕ ಕಾಟವೆ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net