ಹುಂಡಿಯಲ್ಲಿದ್ದ ನಗ-ನಗದು ಕದ್ದವರ ಬಂಧನ

arrested two peoples
ಹುಂಡಿಯಲ್ಲಿದ್ದ ನಗ-ನಗದು ಕದ್ದವರ ಬಂಧನ
Published on: 

ಹುಬ್ಬಳ್ಳಿ: ನಗರದ ಗಬ್ಬೂರಿನ ಜೈನ ಮಂದಿರದಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಬೆಂಡಿಗೇರಿ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕಳವು ಮಾಡಿ ಪರಾರಿಯಾಗಿದ್ದ ರಾಜಸ್ಥಾನ ಮೂಲದ ಪಪ್ಪುರಾಯ ಸುರ್ಜೇರಾಮ್ (22), ರವಿಕುಮಾರ ಚೇತರಾಮ್ (21) ನನ್ನು ಬಂಧಿಸಿದ್ದು, ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅ. 3ರ ರಾತ್ರಿ ಹೊಸ ಗಬ್ಬೂರಿನ ಆದಿನಾಥ ಜೈನ ಮಂದಿರದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಸುಮಾರು 11.48 ಲಕ್ಷ ರೂ. ಕಳವು ಮಾಡಿ ಕಳ್ಳರು ಪರಾರಿಯಾಗಿದ್ದರು. ಹುಂಡಿಯಲ್ಲಿ 4.22 ಲಕ್ಷ ರೂ. ನಗದು, ಬೆಳ್ಳಿ ಆಭರಣಗಳಿದ್ದವು. ದೇವರ ಕಿರೀಟ ತಲೆಗೆ ಹಾಕಿಕೊಂಡು ಕಳ್ಳರು ಕುಣಿದಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದ ತಂಡ ಗುಜರಾತ, ರಾಜಸ್ಥಾನ ರಾಜ್ಯದಲ್ಲಿ ಬೀಡು ಬಿಟ್ಟು, ಕಳ್ಳರನ್ನು ಬಂಧಿಸಿದೆ.