ಸೈಕ್ಲೋಥಾನ್, ವಾಕಥಾನ್ 25ರಂದು

wakathon
ಹುಬ್ಬಳ್ಳಿಯಲ್ಲಿ ಗುರುವಾರ ಸೈಕ್ಲೋಥಾನ್ ಹಾಗೂ ವಾಕಥಾನ್ ಪೋಸ್ಟರ್‌ಗಳನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆಗೊಳಿಸಿದರು.
Published on: 

ಹುಬ್ಬಳ್ಳಿ: ನಶಾ ಮುಕ್ತ ಭಾರತ ಅಭಿಯಾನ ನಿಮಿತ್ತ ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್ ಸಹಯೋಗದಲ್ಲಿ ಅ. 25ರಂದು ಬೆಳಗ್ಗೆ 6.30ಕ್ಕೆ ಐದು ಕಿ.ಮೀ. ಸೈಕ್ಲೋಥಾನ್, 6.50ಕ್ಕೆ ಐದು ಕಿ.ಮೀ. ವಾಕಥಾನ್ ಏರ್ಪಡಿಸಲಾಗಿದೆ ಎಂದು ಫಿಟ್ ಇಂಡಿಯಾ ಚಾಂಪಿಯನ್, ನಟಿ ರಾಗಿಣಿ ದ್ವಿವೇದಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ತೋಳನಕೆರೆ ವೃತ್ತದಿಂದ ಆರಂಭವಾಗಿ ವಿದ್ಯಾನಗರದ ಓಕ್ಟ್ ಹೋಟೆಲ್‌ವರೆಗೆ ಸಾಗಿ ಮರಳಿ ತೋಳನಕೆರೆ ವೃತ್ತ ತಲುಪಲಿದೆ. 3ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದರು.

ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಮೂವ್‌ಮೆಂಟ್‌ಅಡಿಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಜೆನೆಕ್ಟ್ ಚಾರಿಟೇಬಲ್ ಟ್ರಸ್ ಬೆಂಬಲದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಸುವ ಟ್ ಇಂಡಿಯಾ ಮೂವ್‌ಮೆಂಟ್‌ನ ವಿಶಾಲ ದೃಷ್ಟಿಕೋನವನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ ಎಂದರು.

ಭಾಗವಹಿಸಲಿಚ್ಛಿಸುವವರು ಸೈಕ್ಲೋಥಾನ್, ವಾಕಥಾನ್ ಯಾವುದಾದರೊಂದು ಆಯ್ಕೆ ಮಾಡಿಕೊಂಡು ಪಾಲ್ಗೊಳ್ಳಬಹುದು. ಭಾಗವಹಿಸುವವರಿಗೆ ಟಿ-ಶಟ್ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ದಕ್ಷಿಣ ಭಾರತದ ಹುಬ್ಬಳ್ಳಿಯಿಂದ ಈ ಕಾರ್ಯಕ್ರಮ ಆಯೋಜಿಸಿ ವಿಸ್ತರಿಸಲಾಗುವುದು ಎಂದರು.

ಇದೇ ವೇಳೆ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಫಿರಂಗಿ, ಕಾರ್ಯದರ್ಶಿ ಶಿವಾನಂದ ದಂಡಾವತಿಮಠ, ಆನಂದ ಪಟ್ಟಣಶೆಟ್ಟಿ, ಡಾ. ಅರುಣ ಯಳಮಲಿ, ಅಕ್ಷಯ ಬಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net