

ಹುಬ್ಬಳ್ಳಿ: ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದೆಂಬ ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೋಡುತ್ತಿದ್ದ ಧಾರವಾಡದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 6.53 ಲಕ್ಷ ರೂ. ಅಪರಿಚಿತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.
ಧಾರವಾಡ ಮಹಾರಾಜ ಹುಲಗೂರ ವಂಚನೆಗೆ ಒಳಗಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೈಂತ್ರಾ ಡಿಜೈನ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಜಾಹೀರಾತು ನೋಡಿ ಮಹಾರಾಜ ಅದನ್ನು ಓಪನ್ ಮಾಡಿದ್ದಾರೆ. ಆಗ ತಮ್ಮ ಫೋನ್ ನಂಬರ್ ಅದರಲ್ಲಿ ನಮೂದಿಸಿ, ಅನ್ಯ ಎಂಬುವವರು ಟೆಲಿಗ್ರಾಂ ಐಡಿ ಕೊಟ್ಟು ಮೈಂತ್ರಾ ಡಿಜೈನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಲು ತಿಳಿಸಿದ್ದಾರೆ.
ಹಂತ ಹಂತವಾಗಿ ದೂರುದಾರ ಹಾಗೂ ಆತನ ತಾಯಿ ಹೆಸರಿನಲ್ಲಿದ್ದ ಖಾತೆಗಳಿಂದ ಹಣ ಹೂಡಿಕೆ ಮಾಡಿಸಿದ್ದು, ವಿತ್‌ಡ್ರಾ ಮಾಡಲು ಶೇ. 20ರಷ್ಟು ತೆರಿಗೆ ಪಾವತಿಸುವಂತೆ ಹೇಳಿದಲ್ಲದೆ, ಎಲ್ಲ ಐಡಿಗಳನ್ನು ಡಿಲೀಟ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಮಹಾರಾಜ, ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.