ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ
medica drugs
Published on: 

ಹುಬ್ಬಳ್ಳಿ: ಇಲ್ಲಿಯ ಉದ್ಯಮ ನಗರ ಹತ್ತಿರ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವಿನ ಮಾತ್ರೆಗಳನ್ನು ಮಾರಾಟ ಹಾಗೂ ಸಾಗಣೆ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಸೇರಿದಂತೆ ಮೂವರು ಡ್ರಗ್ ಪೆಡ್ಲರ್‌ಗಳನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೊಯಂಬತೂರಿನ ರಘುಕೃಷ್ಣನ್ ಅಲಿಯಾಸ್ ಕುಳ್ಳಿ (24), ರಾಜಕುಮಾರ ಶ್ರೀನಿವಾಸನ್ (21), ಹಳೇ ಹುಬ್ಬಳ್ಳಿ ಅರವಿಂದ ನಗರದ ಪ್ರವೀಣ ವಿಜಯಶೆಟ್ಟಿ ಬಂಧಿತರು. ಬಂಧಿತರಿಂದ ಒಟ್ಟು 1ಕೆಜಿ 300 ಗ್ರಾಂ ತೂಕದ ಎಂಡಿಎಂ ಮಾದಕ ವಸ್ತುಗಳ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

ರಘುಕೃಷ್ಣನ್ ವಿರುದ್ಧ ತಮಿಳುನಾಡಿನ ಕುನಿಯಾಮುತ್ತೂರು, ಚೆಟ್ಟಿಪಾಳಯಂ, ಮಧುಕ್ಕರೈ ಪೊಲೀಸ್ ಠಾಣೆಗಳಲಿ ಪ್ರಕರಣಗಳು ದಾಖಲಾಗಿವೆ. ಪ್ರವೀಣ ಶೆಟ್ಟಿ ವಿರುದ್ಧ ತಮಿಳುನಾಡಿನ ಕರುಂಬಕಡೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಡಿಎಂಎ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಗೋಕುಲ ರೋಡ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ದಿಡಗನಾಳ, ಪಿಎಸ್‌ಐ ಸಚಿನ್‌ಕುಮಾರ ದಾಸರೆಡ್ಡಿ, ಸಿಬ್ಬಂದಿ ಲಕ್ಷ್ಮಣ ನಾಯಕ, ಸಂತೋಷ ಆಡೂರ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಬಂಧಿಸಿತ್ತು. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ.