ಮಹಿಳಾ ಪೊಲೀಸ್ ಮೇಲೆ ಹಲ್ಲೆ

women police constable assaulted
ವಿದ್ಯಾನಗರ ಠಾಣೆ
Published on: 

ಹುಬ್ಬಳ್ಳಿ: ಮದ್ಯ ಕುಡಿದು ಒಬ್ಬರ ತಲೆಗೆ ಹೊಡೆದಿದ್ದಲ್ಲದೆ, ಬುದ್ದಿ ಹೇಳಿದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗೂ ಕಲ್ಲಿನಿಂದ ಹಲ್ಲೆ ನಡೆಸಿರುವ ಆರೋಪದಡಿ ಇಲ್ಲಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

ದೀಪಾಲಿ ಜಿ. ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಣಕಲ್‌ನ ಶ್ರೀನಿಧಿ ಹೋಟೆಲ್ ಒಳಗಡೆ ಗಲಾಟೆ ನಡೆದಿದ್ದು, ದೀಪಾಲಿ ಮದ್ಯಪಾನ ಮಾಡಿ ಅಮಿನ್ ಎನ್. ಎನ್ನುವ ಹುಡುಗನೊಂದಿಗೆ ಗಲಾಟೆ ಮಾಡಿದ್ದಾಳೆ. ಅಲ್ಲದೆ, ಆತನ ತಲೆಗೆ ರಕ್ತ ಬರುವಂತೆ ಹೊಡೆದಿದ್ದಾಳೆ. ಹೋಟೆಲ್ ಸಿಬ್ಬಂದಿಗೂ ಅವಾಚ್ಯವಾಗಿ ಬೈದು ಗಲಾಟೆ ಮಾಡಿದ್ದಾಳೆ.

ವಿದ್ಯಾನಗರ ಠಾಣೆ ಪಿಎಸ್‌ಐ ಸುನೀಲ ಅವರು ಈ ಗಲಾಟೆ ನೋಡಿ, ಸ್ಥಳಕ್ಕೆ ಎಂ.ವೈ. ನಾಯ್ಕರ ಅವರನ್ನು ಕರೆಯಿಸಿಕೊಂಡಿದ್ದಾರೆ. ಮತ್ತಿನಲ್ಲಿದ್ದ ದೀಪಾಲಿಗೆ ಇಲ್ಲಿ ಗಲಾಟೆ ಮಾಡಬೇಡಿ ಮನೆಗೆ ಹೋಗಿ ಎಂದು ನಾಯ್ಕರ್ ಬುದ್ಧಿ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ದೀಪಾಲಿ, ಪೊಲೀಸರನ್ನು ನಿಂದಿಸಿದಲ್ಲದೆ, ನಾಯ್ಕರ್ ಅವರ ಹಣೆಗೆ ಬಲವಾಗಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net