ನೇಕಾರ ಸಮಾಜ ಇನ್ನಷ್ಟು ಸಂಟಿತವಾಗಲಿ: Utsava Muthir Dedication of Silver

ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ದಯಾನಂದಪುರಿ ಸಲಹೆ
NEKAR COMMUNITY
ನಗರದ ನೇಕಾರ ನಗರದಲ್ಲಿ ಏರ್ಪಡಿಸಿದ್ದ ಬನಶಂಕರಿ ದೇವಿಯ ಪ್ರತಿಷ್ಠಾಪನಾ ಬೆಳ್ಳಿಯ ಮಹೋತ್ಸವದ ನಿಮಿತ್ತ ದೇವಿಯ ಬೆಳ್ಳಿಯ ಉತ್ಸವ ಮೂತಿರ್ ಸಮರ್ಪಣೆ ಹಾಗೂ ಯೋಪವೀತ ವಟುಗಳ ಉಪನಯನ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯ ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮೀಜಿ, ಡಾ.ಕೆ.ಜಿ. ಬ್ಯಾಕೋಡಿ, ಶಿವಗಂಗಾ ಮಾನಶೆಟ್ಟರ, ಶಾಂತಾ ಹಿರೇಮಠ ಇತರರಿದ್ದರು.NEKAR COMMUNITY
Published on: 

ಹುಬ್ಬಳ್ಳಿ: ನೇಕಾರ ಸಮಾಜ ಮುಂದೆ ಬರಬೇಕಾದರೆ ಒಗ್ಗಟ್ಟು ಮುಖ್ಯ. ಹೀಗಾಗಿ ಪ್ರತಿಯೊಬ್ಬರೂ ಸಂಟಿತರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮೀಜಿ ಹೇಳಿದರು.

ನಗರದ ನೇಕಾರ ನಗರದ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್​, ಶ್ರೀ ಬನಶಂಕರಿ ದೇವಸ್ಥಾನ ಜೀಣೋರ್ದ್ಧಾರ ಸಮಿತಿ ಹಾಗೂ ಬನಶ್ರೀ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಶ್ರೀ ಬನಶಂಕರಿ ದೇವಿಯ ಪ್ರತಿಷ್ಠಾಪನಾ ಬೆಳ್ಳಿಯ ಮಹೋತ್ಸವದ ನಿಮಿತ್ತ ದೇವಿಯ ಬೆಳ್ಳಿಯ ಉತ್ಸವ ಮೂತಿರ್ ಸಮರ್ಪಣೆ ಹಾಗೂ ಯೋಪವೀತ ವಟುಗಳ ಉಪನಯನ ಸಮಾರಂಭದ ಸೋಮವಾರ ನಡೆದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜ ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಪ್ರಗತಿ ಹೊಂದಬೇಕಾದರೆ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಂದೆ&ತಾಯಿ, ಸಮಾಜಕ್ಕೆ ಕೀತಿರ್ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಹು&ಧಾ ಪೂರ್ವ ವಿಧಾನಸಭಾ ೇತ್ರದ ಶಾಸಕರ ಅನುದಾನದಡಿಯಲ್ಲಿ ನಿಮಿರ್ಸಲಾದ "ದೇವರ ದಾಸಿಮಯ್ಯ ಸಮುದಾಯ ಭವನ'ವನ್ನು ಮಂಡಳಿಯ ಅಧ್ಯ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಲೋಕಾರ್ಪಣೆಗೊಳಿಸಿದರು. ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ ಜ್ಯೋತಿ ಬೆಳಗಿಸಿದರು. ಟ್ರಸ್ಟ್​ ಅಧ್ಯ ನಾಗೇಶ ಭಾಪ್ರಿ ಅಧ್ಯತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ.ಕೆ.ಜಿ. ಬ್ಯಾಕೋಡಿ, ಅರುಣಕುಮಾರ ಗೋಸಿ, ಶಿವಗಂಗಾ ಮಾನಶೆಟ್ಟರ, ಶಾಂತಾ ಹಿರೇಮಠ, ಮಂಜುನಾಥ ಚಿಂತಗಿಂಜಲ್​, ವೆಂಕಟರಮಣ ಚಿಟ್ಟಾ, ರಾಜಕುಮಾರ ಕಾಮರೆಡ್ಡಿ, ಬಾಗಣ್ಣ ಬಿರಾಜದಾರ ಹಾಗೂ ರಾಕೇಶ ಪಲ್ಲಾಟಿ ಆಗಮಿಸಿದ್ದರು. ಇದೇ ವೇಳೆ ಅಂತಾರಾಷ್ಟ್ರೀಯ ಯೋಗಪಟು ರಾಜೇಶ್ವರಿ ಉದಗಟ್ಟಿ, ಸಮಾಜ ಸೇವಕಿ ಸುನಂದಾ ಎ. ಗೋಸಿ ಅವರನ್ನು ಶ್ರೀಗಳು ಸನ್ಮಾನಿಸಿದರು. ತುಕಾರಾಮ ಅಂಕದ, ವಿನೋದ ಜವಳಿ, ಜಗದೀಶ ಸುಳ್ಳಿಕೇರಿ ಸೇರಿದಂತೆ ಇತರರಿದ್ದರು. ಇದೇ ವೇಳೆ ನ.28ರಿಂದ ನಡೆಯುವ ದೇವಾಂಗ ಪ್ರೀಮಿಯರ್​ ಲೀಗ್​&2 ಲೋಗೋ ಹಾಗೂ ಟಿಶರ್ಟ್​ಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.