

ಹುಬ್ಬಳ್ಳಿ: ಆ್ಯಪ್ ಬಳಸಿ ಅಕ್ಕಿ ಖರೀದಿಸಿದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ವಂಚಕರು ಆನ್‌ಲೈನ್ ಮೂಲಕ 1.69 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವಿದ್ಯಾ ಎಂಬುವವರು ಜೆಪ್ರೋ ಆ್ಯಪ್ ಬಳಸಿ ಅಕ್ಕಿ ಖರೀದಿಸಿದ್ದಾರೆ. ಅಕ್ಕಿ ಸರಿ ಇಲ್ಲದ್ದರಿಂದ ವಾಪಸ್ ಕಳುಹಿಸಲು ಗೂಗಲ್‌ನಲ್ಲಿ ಹೆಲ್ಪ್‌ಲೈನ್ ಸರ್ಚ್ ಮಾಡಿದ್ದಾರೆ. ಅದರಲ್ಲಿ ಸಪೋರ್ಟ್ ಟೀ ಜೆಪ್ರೋ ಎನ್ನುವ ವೆಬ್‌ಸೈಟ್‌ನಲ್ಲಿರುವ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಂಚಕರು, ಹೆಲ್ಪ್ ಡೆಸ್ಕ ಹಾಸ್ಟ್ ಎಂಬ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿ, 1,69,034 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.