ಆದಿನಾಥ ಜೈನ ಮಂದಿರದಲ್ಲಿ ಕಳವು

jain temple theft
ಹುಬ್ಬಳ್ಳಿಯ ಗಬ್ಬೂರ ಸಮೀಪದ ಶ್ರೀ ಆದಿನಾಥ ಜೈನ ಮಂದಿರದ ಬಾಗಿಲು ಮುರಿದಿರುವ ಕಳ್ಳರು.
Published on: 

ಹುಬ್ಬಳ್ಳಿ: ಇಲ್ಲಿಯ ಗಬ್ಬೂರ ಸಮೀಪದ ಜಿನ್‌ಕುಶಲ್ ದಾದಾವಡಿ ಟ್ರಸ್ಟ್‌ನ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಭಾನುವಾರ ನಸುಕಿನ ವೇಳೆ ಕಳವಾಗಿದೆ.

ಬಾಗಿಲನ್ನು ರಾಡ್‌ನಿಂದ ಮೀಟಿ ದೇವಾಲಯದೊಳಗೆ ಪ್ರವೇಶಿಸಿದ ಕಳ್ಳರು, ಅಂದಾಜು 7.26 ಮೌಲ್ಯದ 2 ಕೆಜಿ ಬೆಳ್ಳಿ ಆಭರಣ, 4.22 ಲಕ್ಷ ರೂ. ನಗದು ಸೇರಿ ಒಟ್ಟು 11.48 ಲಕ್ಷ ರೂ. ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಬೆಂಡಿಗೇರಿ ಠಾಣೆ ಪೊಲೀಸರು ಭೇಟಿ ನೀಡಿ, ದೇವಾಲಯದಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದೇವಾಲಯದಲ್ಲಿ ಕಳೆದ ಜನವರಿಯಲ್ಲೂ ಕಳವಾಗಿತ್ತು. ಆಗ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಜರಾತ್ ಮೂಲದ ಕೆಲವರನ್ನು ಬಂಧಿಸಿದ್ದರು. ಆಗ ಸುಮಾರು 10ರಿಂದ 11 ಲಕ್ಷ ರೂ. ಮೌಲ್ಯದ ಆಭರಣಗಳು ಕಳುವಾಗಿದ್ದವು ಎನ್ನುತ್ತಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net