ಶಿವಶರಣೆ ಹೇಮರಡ್ಡಿ ಮಲ್ಲಮ್ಮಕೇಂದ್ರೀಯ ಬಸ್​ ನಿಲ್ದಾಣ

ಹುಬ್ಬಳ್ಳಿ ಹೊಸ ನಿಲ್ದಾಣಕ್ಕೆ ನಾಮಕರಣ ಮಾಡಿ ಆದೇಶ
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ನೂತನ ಬಸ್​ ನಿಲ್ದಾಣ.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ನೂತನ ಬಸ್​ ನಿಲ್ದಾಣ.
Published on: 

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ನೂತನ ಬಸ್​ ನಿಲ್ದಾಣಕ್ಕೆ "ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕೇಂದ್ರೀಯ ಬಸ್​ ನಿಲ್ದಾಣ' ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​. ಅವರು ಪತ್ರ ಬರೆದು ನಿರ್ದೇಶನ ನೀಡಿದ್ದಾರೆ.

ಶ್ರೇಷ್ಠ ಶಿವಶರಣೆ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ದೇವರ ಪರಮ ಭಕ್ತೆ, ಸಂಸಾರದಲ್ಲಿ ಇದ್ದುಕೊಂಡೇ ಅಚಲ ಭಕ್ತಿ, ಸಹನೆ, ತಾಳ್ಮೆ, ದಾನ ಧರ್ಮದಿಂದ ಹಾಗೂ ಕ್ಷಮಾ ಗುಣದಿಂದ ದೈವ ಸಾಕ್ಷಾತ್ಕಾರ ಪಡೆದ ಆದರ್ಶ ಮಹಿಳೆಯ ನಾಮಕರಣ ಮಾಡಿರುವುದಕ್ಕೆ ಸಮಾಜದ ಜನರಿಗೆ ಸಂತೋಷ ಉಂಟಾಗಿದೆ.

ಹೇಮರೆಡ್ಡಿ ಮಲ್ಲಮ್ಮ ಜಾತಿ ಮತಗಳನ್ನು ಮೀರಿದ ಸಾಧ್ವಿ. ಹೆಣ್ಣು ಕುಲದ ಆದರ್ಶ ಶಕ್ತಿ, ಅವಳನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ನೋಡದೇ ಮಾದರಿ ಮಹಿಳೆ ಎಂದು ಎಲ್ಲರೂ ಪರಿಗಣಿಸುತ್ತಾರೆ. ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧ್ಯ ದೈವವಾಗಿ ಪೂಜಿಸುತ್ತಾ, ಹಲವಾರು ಪವಾಡಗಳನ್ನು ಮಾಡುತ್ತ, ಕೊನೆಗೆ ತಾನೇ ದೈವವಾಗಿ ಅವತರಿಸಿದವಳು ಹೇಮರೆಡ್ಡಿ ಮಲ್ಲಮ್ಮ ಎಂದು ಸಮಾಜದ ಅನೇಕರು ತಿಳಿಸಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸಿ ಹೇಮರಡ್ಡಿ ಮಲ್ಲಮ್ಮರ ಹೆಸರು ಅಜರಾಮರಗೊಳಿಸಿದ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಹಕರಿಸಿದ ಎಲ್ಲರಿಗೂ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ನಿಗಮದ ರೆಡ್ಡಿ ನೌಕರರ ಸಂಘದ ಗೌರವಾಧ್ಯಕ್ಷ ಶ್ರೀಧರ ರಡ್ಡೇರ ಅಭಿನಂದನೆ ತಿಳಿಸಿದ್ದಾರೆ.