ವರೂರ ಚರಮೂರ್ತೇಶ್ವರ ರಥೋತ್ಸವ ಸೋಮವಾರ charamurtheshwar

ವರೂರ ಗ್ರಾಮದ ಶ್ರೀ ಚರಮೂರ್ತೇಶ್ವರ ದೇವರ ಗದ್ದುಗೆ.
ವರೂರ ಗ್ರಾಮದ ಶ್ರೀ ಚರಮೂರ್ತೇಶ್ವರ ದೇವರ ಗದ್ದುಗೆ.
Published on

ಪ್ರಮುಖ ಮುಖ್ಯಾಂಶಗಳು

  • ಪವಾಡಪುರುಷ, ಭಕ್ತೋದ್ಧಾರಕ
  • ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ

ಹುಬ್ಬಳ್ಳಿ:ತಾಲೂಕಿನವರೂರ ಗ್ರಾಮದ ಛಬ್ಬಿ ಕ್ರಾಸ್‌ನಲ್ಲಿ800ವರ್ಷಗಳಇತಿಹಾಸವಿರುವ ಶ್ರೀ ಚರಮೂರ್ತೇಶ್ವರಮಠದಲ್ಲಿ ಶ್ರಾವಣ ಮಾಸದ ನಾಲ್ಕನೇಸೋಮವಾರ ನಿಮಿತ್ತ ಸೆ.7ರಂದುಸಂಜೆ 5ಕ್ಕೆಶ್ರೀ ಚರಮೂರ್ತೇಶ್ವರ ದೇವರಮಹಾರಥೋತ್ಸವ ಜರುಗಲಿದೆ.ಅಂದುಬೆಳಗಿನ ಜಾವ ಶ್ರೀಗಳ ಗದ್ದುಗೆಗೆಮಹಾರುದ್ರಾಭಿಷೇಕ,ಪಂಚಾಮೃತಅಭಿಷೇಕ,ಗಣಹೋಮಹಾಗೂ ವಿಶೇಷ ಪೂಜೆ.ಮಧ್ಯಾಹ್ನಅನ್ನ ಸಂತರ್ಪಣೆ,ಸಂಜೆ5ಕ್ಕೆಪಲ್ಲಕ್ಕಿ ಉತ್ಸವ,ಜಗ್ಗಲಿಗೆಮೇಳದೊಂದಿಗೆ ರಥೋತ್ಸವ ನೆರವೇರಲಿದೆ.

ಚರಮೂರ್ತೇಶ್ವರರಚರಿತ್ರೆ:ಶ್ರೀಗುರುಲಿಂಗದೇವರು-ಶಿವಲೀಲಾದೇವಿದಂಪತಿಯ ಬಹಳ ದಿನಗಳ ತಪಸಿನ ಫಲವಾಗಿಹಾಲುದೇವರು-ಸಕ್ರದೇವರುಅವಳಿ-ಜವಳಿಪುತ್ರರು ಜನಿಸಿದರು.ಮುಂದೆಗುರುಕುಲದಲ್ಲಿ ಅಭ್ಯಾಸ ಮಾಡಿ20ನೇವಯಸ್ಸಿನಲ್ಲಿ ಹಾಲುದೇವರು ವರೂರಿನಮಠಕ್ಕೆ ಬಂದರು.ಒಂದುದಿನ ಅವರ ಸ್ವಪ್ನದಲ್ಲಿ ಶ್ರೀರೇಣುಕಾರಾಧ್ಯರು ಪ್ರತ್ಯಕ್ಷರಾದರು.ಮಗುನೀನು ಧರ್ಮೋನ್ನತಿಗಾಗಿ ನಿನ್ನಜೀವನ ಮುಡಿಪಿಡಬೇಕು.ಇಂದಿನಿಂದನೀನು ಚರಮೂರ್ತೇಶ್ವರ ಹೆಸರಿನಿಂದಭಕ್ತರನ್ನು ಉದ್ಧರಿಸು ಎಂದುಹೇಳಿ ಶ್ರೀ ರೇಣುಕಾರಾಧ್ಯರುಮಾಯವಾದರು.

ಮುಂದೆಕೆಲ ವರ್ಷಗಳ ಬಳಿಕ ಉಭಯ ಪುತ್ರರಿಗೆವಿವಾಹ ಮಾಡಲು ತಂದೆ-ತಾಯಿಕನ್ಯಾನ್ವೇಷಣೆಗೆ ತೊಡಗಿದರು.ಆಗಸಕ್ರದೇವರು ಮದುವೆಗೆ ಒಪ್ಪಿದರು.ಹಾಲುದೇವರುನಿರಾಕರಿಸಿದರು.ಹೀಗಾಗಿ,ಭಕ್ತರುವರೂರಿನಲ್ಲಿ ಹಾಲುದೇವರ ಪಟ್ಟಾಭಿಷೇಕಕಾರ್ಯಕ್ರಮ ನೆರವೇರಿಸಿದರು.ಆವೇಳೆ ಬಹಳ ದಿನಗಳಿಂದ ಗ್ರಾಮದಲ್ಲಿಮಳೆ ಆಗಿರಲಿಲ್ಲ.ಶ್ರೀಗಳಪಟ್ಟಾಭಿಷೇಕದ ದಿನದಂದು ಸಾಕುಎನ್ನುವಷ್ಟು ಮಳೆ ಸುರಿಯಿತು.ಸೇರಿದಭಕ್ತರು ಶ್ರೀ ಚರಮೂರ್ತೇಶ್ವರಮಹಾರಾಜರಿಗೆ ಜಯವಾಗಲಿ ಎಂದುಜಯಘೋಷ ಮೊಳಗಿಸಿದರು.

ಘಟಸರ್ಪದರೋಷಾಗ್ನಿ ಶಮನ:ಶ್ರೀಚರಮೂರ್ತೇಶ್ವರರು ತಪೋನುಷ್ಠಾನಗೈದಸ್ಥಳದ ಬಳಿ ಸರ್ಪವೊಂದು ಜನರಿಗೆತೊಂದರೆ ನೀಡುತ್ತಿತ್ತು.ಭಕ್ತರುಇದನ್ನು ನಿವಾರಿಸುವಂತೆ ಶ್ರೀಗಳಬಳಿ ನಿವೇದಿಸಿಕೊಂಡರು.ಶ್ರೀಚರಮೂರ್ತೇಶ್ವರರು ಭಕ್ತರಸಮ್ಮುಖದಲ್ಲಿ ಘಟಸರ್ಪಕ್ಕೆ ಭಸ್ಮಲೇಪಿಸಿ ಅದರ ರೋಷಾಗ್ನಿ ಶಮನಗೊಳಿಸಿದರು. 
ಹೀಗೆ,ಬೇಡಿಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತ,ಹಲವುಲೀಲಾ,ಪವಾಡಗಳನ್ನುಮಾಡಿದ ಶ್ರೀಗಳು ತಮ್ಮ 101ವಯಸ್ಸಿನಲ್ಲಿಶಿವನ ಅಪ್ಪಣೆಯಂತೆ ಸಮಾಧಿಸ್ಥಿತಿಯಲ್ಲಿಧ್ಯಾನಸ್ಥರಾಗಿ ಮಹಾಲಿಂಗದಲ್ಲಿಲೀನರಾದರು.ಇಂದಿಗೂಗ್ರಾಮದ ಶ್ರೀ ಚರಮೂರ್ತೇಶ್ವರಮಠದಲ್ಲಿರುವ ಗದ್ದುಗೆಗೆ ಬಂದುಬೇಡುವ ಭಕ್ತರ ಇಷ್ಟಾರ್ಥಸಿದ್ಧಿಸುತ್ತಿರುವುದು ಜನಜನಿತವಾಗಿದೆ.

"

ಭಕ್ತರನ್ನು ಕಾಪಾಡುವ ಚರಮೂರ್ತೇಶ್ವರ ದೇವರ ಪವಾಡ ಕಂಡ ಮೈಸೂರಿನ ಮಹಾರಾಜರು ಗಂಧದ ಕಟ್ಟಿಗೆಯಲ್ಲಿ ಪಲ್ಲಕ್ಕಿ ನಿರ್ಮಿಸಿ, ಅದರಲ್ಲಿ ಚರಮೂರ್ತೇಶ್ವರ ಶ್ರೀಗಳನ್ನು ಕೂರಿಸಿ ಮೈಸೂರಿನಲ್ಲಿ ಮೆರವಣಿಗೆ ಮಾಡಿದರು. ಬಳಿಕ ಆ ಪಲ್ಲಕ್ಕಿಯನ್ನು ದೇವಸ್ಥಾನಕ್ಕೆ ನೀಡಿದ್ದಾರೆ. ದೇವಸ್ಥಾನದ ಅಭಿವೃದ್ಧಿಯಲ್ಲಿ ನಾಯ್ಕರ ಪರಿವಾರದ ಕೊಡುಗೆ ಅಪಾರವಿದೆ.
ರುದ್ರಯ್ಯ ಹಿರೇಮಠ, ಗ್ರಾಪಂ ಮಾಜಿ ಉಪಾಧ್ಯಕ್ಷ

"

ಶ್ರಾವಣ ಮಾಸದ ನಿಮಿತ್ತ ಭಕ್ತರು ದೇವಸ್ಥಾನಕ್ಕೆ ಒಂದು ತಿಂಗಳು ಬೆಳಗಿನ ಜಾವ 4 ಗಂಟೆಗೇ ಬಂದು ಸರದಿ ಸಾಲಿನಿಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಈ ಬಾರಿ ಯುವಕರು ದೇವಸ್ಥಾನ ಸುತ್ತ ಸ್ವಚ್ಛತಾ ಕೆಲಸ ಮಾಡಿದ್ದಾರೆ. ಗ್ರಾಮದ ಹನ್ೀ ಮುಲ್ಲಾ ಮಠದಲ್ಲಿ ಸಂಗೀತ ಸೇವೆ ನೀಡಿದ್ದಾರೆ.
ಗಂಗಾಧರಯ್ಯ ಹಿರೇಮಠ, ದೇವಸ್ಥಾನದ ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net