ಹೆಗ್ಗೇರಿಯಲ್ಲಿ ದಂತ ತಪಾಸಣೆ ಶಿಬಿರ

ಡಾ. ವೀರೇಂದ್ರ ಹೆಗ್ಗಡೆ ಅವರ 79ನೇ ಜನ್ಮದಿನ
ಹುಬ್ಬಳ್ಳಿಯ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ದಂತ ತಪಾಸಣೆ ಶಿಬಿರದಲ್ಲಿ ಡಾ. ಪ್ರೀತಾ ಶೆಟ್ಟಿ, ಪ್ರೊ. ಜಯಕುಮಾರ, ಡಾ. ರೂಪಾ ಇಂಗಳಹಳ್ಳಿ, ಸುರೇಶ ಲಿಂಬಿಕಾಯಿ ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿಯ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ದಂತ ತಪಾಸಣೆ ಶಿಬಿರದಲ್ಲಿ ಡಾ. ಪ್ರೀತಾ ಶೆಟ್ಟಿ, ಪ್ರೊ. ಜಯಕುಮಾರ, ಡಾ. ರೂಪಾ ಇಂಗಳಹಳ್ಳಿ, ಸುರೇಶ ಲಿಂಬಿಕಾಯಿ ಇತರರು ಪಾಲ್ಗೊಂಡಿದ್ದರು.SIDDHRTH
Published on: 

ಹುಬ್ಬಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಧಮಾರ್ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ 79ನೇ ಜನ್ಮದಿನದ ಅಂಗವಾಗಿ ಇಲ್ಲಿಯ ಹೆಗ್ಗೇರಿ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯೂತ್​ ರೆಡ್​ ಕ್ರಾಸ್​ ಘಟಕ ಮತ್ತು ಕಾನೂನು ಘಟಕಗಳ ವತಿಯಿಂದ ಎಸ್​ಡಿಎಂ ದಂತ ವೈದ್ಯಕಿಯ ಆಸ್ಪತ್ರೆ ಸಂಯುಕ್ತಾಶ್ರಯಗಳಲ್ಲಿ ಉಚಿತ ದಂತ ತಪಾಸಣೆ ಶಿಬಿರ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಯಿತು.

ಎಸ್​ಡಿಎಂ ದಂತ ವೈದ್ಯಕಿಯ ಆಸ್ಪತ್ರೆ ವೈದ್ಯ ಡಾ. ಪ್ರೀತಾ ಶೆಟ್ಟಿ ಮಾತನಾಡಿ, ಆಸ್ಪತ್ರೆ ವತಿಯಿಂದ ಜನರಿರುವ ಪ್ರದೇಶಕ್ಕೆ ಹೋಗಿ ಅವರ ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸದೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಪಡೆಯಬೇಕು. ಯುವಜನರು ಗುಟ್ಕಾ ಮುಂತಾದ ದುಶ್ಚಟಗಳಿಂದ ಮುಕ್ತವಾಗಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ರೆಡ್​ಕ್ರಾಸ್​ ಘಟಕದ ಅಧ್ಯಕ್ಷ ಪ್ರೊ. ಜಯಕುಮಾರ್​ ಕೆ.ಎಸ್​. ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನವನ್ನು ಇಂತಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ದಂತ ಆರೋಗ್ಯಕ್ಕಾಗಿ ನಿಯಮಿತ ದಂತ ಮಜ್ಜನ ಹಾಗೂ ತಪಾಸಣೆಯನ್ನು ಮಾಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರೂಪ ಇಂಗಳಹಳ್ಳಿ ಮಾತನಾಡಿ, ಶಿಬಿರದ ಮೂಲಕ ಸುತ್ತ ಮುತ್ತಲಿನ ನಿವಾಸಿಗಳಿಗೆ ಅನುಕೂಲ ಮಾಡಲಾಗಿದೆ. ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು ಎಂದರು.

ಡಾ. ಅನನ್ಯ, ಡಾ. ಮಾನಸಿ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು. ಎನ್​ಎಸ್​ಎಸ್​ ಘಟಕದ ಮುಖ್ಯಸ್ಥ ಸುರೇಶ ಲಿಂಬಿಕಾಯಿ ಸ್ವಾಗತಿಸಿದರು. ರಾಧಿಕಾ ಕಾರ್ಯಕ್ರಮ ನಿರೂಪಿಸಿದರು.