ದಿನಾಚರಣೆ ಬಹಿಷ್ಕರಿಸಿ ಪ್ರತಿಭಟಿಸಿದ ಪೌರ ಕಾರ್ವಿುಕರು

ಕೈಗೆ ಕಪುಪಟ್ಟಿ ಧರಿಸಿ, ಪ್ರತಿಭಟನೆ
Civic workers staged a protest in Hubballi, wearing black badges, to demand the fulfillment of various demands.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ವಿುಕರು ಹುಬ್ಬಳ್ಳಿಯಲ್ಲಿ ಕಪು್ಪ ಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.
Published on

ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಪೌರ ಕಾರ್ವಿುಕರು ಕೈಗೆ ಕಪುಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ವಿುಕರ ದಿನಾಚರಣೆಯನ್ನು ಬಹಿಷ್ಕರಿಸಿದ ಪ್ರತಿಭಟನಾಕಾರರು, ಬೃಹತ್ ಬೆಂಗಳೂರು ಪ್ರಾಧಿಕಾರ ಪೌರ ಕಾರ್ವಿುಕರಿಗೆ 22 ಸಾವಿರ ರೂ. ಬೋನಸ್ ನೀಡಿದೆ. ಅದೇ ಮಾದರಿಯಲ್ಲಿ ಹು-ಧಾ ಪಾಲಿಕೆಯ ಪೌರ ಕಾರ್ವಿುಕರಿಗೂ ಬೋನಸ್ ನೀಡಬೇಕು ಎಂದು ಆಗ್ರಹಿಸಿದರು.

ಸಂಘದಿಂದ ನಿರಂತರ ಹೋರಾಟ ನಡೆಸುತ್ತ ಬಂದಿದ್ದರೂ ಪಾಲಿಕೆ ಆಯುಕ್ತರು ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೇರ ವೇತನ ಪೌರ ಕಾರ್ವಿುಕರು ಮರಣ ಹೊಂದಿ ಒಂದು ವರ್ಷ ಗತಿಸಿದರೂ ಅವರ ಅವಲಂಬಿತರಿಗೆ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ನೇರ ವೇತನದಡಿ ನೇಮಕಾತಿ ಮಾಡಿಕೊಂಡಿಲ್ಲ. ಹೀಗಾಗಿ, ಮೃತ ಪೌರ ಕಾರ್ವಿುಕರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ದೂರಿದರು.

2024ರ ಸೆ. 30 ಹಾಗೂ ನ. 29ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ವಿುಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎರಡು ಬಾರಿ ಠರಾವು ಪಾಸ್ ಮಾಡಲಾಗಿದೆ. ಅವುಗಳನ್ನು ಸಹ ಅನುಷ್ಠಾನಗೊಳಿಸದೇ ಪಾಲಿಕೆ ಆಯುಕ್ತರು ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗಂಗಮ್ಮ ಸಿದ್ರಾಮಪುರ, ಅನಿತಾ ಈನಗೊಂಡ, ಗಾಳೆಪ್ಪ ದ್ವಾಸಲಕೇರಿ, ದತ್ತಪ್ಪ ಆಪುಸಪೇಟ, ಲಕ್ಷ್ಮೀ ವಾಲಿ, ಗಾಳೆಪ್ಪ ರಣತೂರ, ಮಹೇಶ ಮಾದರ, ಲಕ್ಷ್ಮೀ ಬೇತಾಪಲ್ಲಿ, ನಾಗರಾಜ ದೊಡ್ಡಮನಿ, ಪಾರವ್ವ ಹೊಸಮನಿ, ರೇಣುಕಾ ನಾಗರಾಳ ಫಕ್ಕೀರವ್ವ ಕಡಕೋಳ, ಮರೆವ್ವ ಚಲವಾದಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ದುರ್ಗಮ್ಮ ಬೆಜವಾಡ ಹಾಗೂ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ನಡೆಸಿದರು. ಬೇಡಿಕೆ ಪರಿಶೀಲಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net