

ಹುಬ್ಬಳ್ಳಿ: ಇಲ್ಲಿಯ ಐಬಿಎಂಆರ್ ಕಾಲೇಜಿನ ಐಕ್ಯೂಎಸಿ ವತಿಯಿಂದ ಡಿಬೇಟಿಂಗ್ ಯುನಿಯನ್ ಆ್ಯಂಡ್ ಜಿಮಖಾನಾ ಆಕ್ಟಿವಿಟಿಸ್ ಉದ್ಘಾಟನೆ ಕಾರ್ಯಕ್ರಮ "ಅಭ್ಯುದಯ' ಗುರುವಾರ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಸಂಭ್ರಮದಿಂದ ನಡೆಯಿತು.
ಶಿಕ್ಷಕರಿಗೆ ಗೌರವ, ಸೈನಿಕರಿಗೆ ವಿಶೇಷ ಸನ್ಮಾನ, ವಿದ್ಯಾರ್ಥಿ ನಾಯಕರಿಗೆ ನಾಯಕತ್ವ ಬ್ಯಾಡ್ಜ್ ವಿತರಣೆ ಮಾಡಲಾಯಿತು.
ಅತಿಥಿಗಳಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಚರ್ಚೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಮಾಜ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವುದು ಶಿಕ್ಷಣ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ. ಅಭ್ಯುದಯವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಬೆಳೆಸಲು ಸಹಕಾರಿಯಾಗಿದೆ ಎಂದರು.
ಐಬಿಎಂಆರ್ ಟ್ರಸ್ಟಿ ಸುಮಾ ಮಹೇಂದ್ರಕರ, ಎಂಬಿಎ ನಿರ್ದೇಶಕ ಡಾ. ವೀರಣ್ಣ ಡಿ.ಕೆ., ಇತರರು ಉಪಸ್ಥಿತರಿದ್ದರು.
ಗೌರವ ಸಮರ್ಪಣೆ: ಶಿಕ್ಷಕರ ಸೇವೆ ಸ್ಮರಿಸಿದ ಗಣ್ಯರು, ಶಿಕ್ಷಕರ ಜ್ಞಾನ ಮತ್ತು ಸೈನಿಕರ ತ್ಯಾಗ, ರಾಷ್ಟ್ರ ನಿರ್ಮಾಣದ ಎರಡು ಪ್ರಮುಖ ಶಕ್ತಿಗಳು ಎಂದು ಅಭಿಪ್ರಾಯಪಟ್ಟರು.
ಸೈನಿಕರನ್ನು ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ತ್ಯಾಗ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವ ಸಂದೇಶ ನೀಡಲಾಯಿತು. ವಿದ್ಯಾರ್ಥಿ ನಾಯಕರಿಗೆ ಲೀಡರ್ಶಿಪ್ ಬ್ಯಾಡ್ಜ್ ವಿತರಿಸಲಾಯಿತು.
ಪ್ರೊ. ಸಮೀರ್ ಗುಡಿ ಕಾರ್ಯಕ್ರಮ ನಿರ್ವಹಿಸಿದರು. ಕಲಾ ವಿಭಾಗದ ಮುಖ್ಯಸ್ಥ ಅಣ್ಣಪ್ಪ ಕೊರವರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ನವೀನ್ ವಂದಿಸಿದರು.
ಸುಮಂತ್, ನಜೀಮ್, ರವಿ ಕಬ್ಬಿಣದ, ಮೋನಿಕಾ, ಶಗುಪ್ತ ನಾಜ್, ಸೌಜನ್ಯ ಪಿ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.