book release ಮಹಾಮಂಡಳೋತ್ಸವ- 50 ಪುಸ್ತಕ ಬಿಡುಗಡೆ

book release ಹುಬ್ಬಳ್ಳಿಯಲ್ಲಿ ಮಂಗಳವಾರ ಮಹಾಮಂಡಳೋತ್ಸವ-50 ಪುಸ್ತಕವನ್ನು ಡಾ. ಜಿತೇಂದ್ರ ಮಜೇಥಿಯಾ ಬಿಡುಗಡೆ ಮಾಡಿದರು. ಶ್ರೀನಿವಾಸ ಏಕಬೋಟೆ, ಶ್ರೀನಿವಾಸ ಬೋಚಗೇರಿ, ಅನಿತಾ ಜಡಿ, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಎಸ್​.ಎಸ್​. ಕಮಡೊಳ್ಳಿಶೆಟ್ಟರ ಇತರರು ಇದ್ದರು.
book release ಹುಬ್ಬಳ್ಳಿಯಲ್ಲಿ ಮಂಗಳವಾರ ಮಹಾಮಂಡಳೋತ್ಸವ-50 ಪುಸ್ತಕವನ್ನು ಡಾ. ಜಿತೇಂದ್ರ ಮಜೇಥಿಯಾ ಬಿಡುಗಡೆ ಮಾಡಿದರು. ಶ್ರೀನಿವಾಸ ಏಕಬೋಟೆ, ಶ್ರೀನಿವಾಸ ಬೋಚಗೇರಿ, ಅನಿತಾ ಜಡಿ, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಎಸ್​.ಎಸ್​. ಕಮಡೊಳ್ಳಿಶೆಟ್ಟರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತ್ಯ ಪುಸ್ತಕಗಳಿಂದ ಜೀವನ ಪಾವನ
  • ಡಾ. ಜಿತೇಂದ್ರ ಮಜೇಥಿಯಾ ಅನಿಸಿಕೆ
ಹುಬ್ಬಳ್ಳಿ: book release ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊರ ತಂದಿರುವ ಮಹಾಮಂಡಳೋತ್ಸವ- 50 ಪುಸ್ತಕ ಬಿಡುಗಡೆ ಸಮಾರಂಭ ಮೂರುಸಾವಿರ ಮಠದ ಸಭಾಭವನದಲ್ಲಿ ಮಂಗಳವಾರ ಜರುಗಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಜೇಥಿಯಾ ಫೌಂಡೇಷನ್​ ಚೇರ್ಮನ್​ ಡಾ. ಜಿತೇಂದ್ರ ಮಜೇಥಿಯಾ ಅವರು, ಎಲ್ಲರ ಬದುಕಿನಲ್ಲಿ ಒಂದು ಸಂಸ್ಕಾರ ಬೆಳೆಯಬೇಕೆಂದರೆ ಪರಿಸರದ ಬಗೆಗಿನ ಜ್ಞಾನ ಬೇಕು, ಜೀವನ ಪಾವನಗೊಳ್ಳಬೇಕಾದರೆ ಸಾಹಿತ್ಯ, ಪುಸ್ತಕ, ಹಿರಿಯರ ಮಾರ್ಗದರ್ಶನ, ಸಜ್ಜನರ ಸಹವಾಸ ಅಗತ್ಯ, ಇಂದಿನ ವಾತಾವರಣದಲ್ಲಿ ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅವಶ್ಯಕ ಎಂದರು.
ಅತಿಥಿಯಾಗಿದ್ದ ಸಮಾಜ ಸೇವಕ, ಉದ್ಯಮಿ ಶ್ರೀನಿವಾಸ ಏಕಬೋಟೆ ಮಾತನಾಡಿ, ಪುಸ್ತಕ ಓದುವುದರಿಂದ ಓದಿದ ಪದಗಳು ಸದಾ ನೆನಪಿಗೆ ಬರುತ್ತವೆ. ಬಾಲ್ಯದಲ್ಲಿ ಕಲಿತ ಪಾಠ, ಓದು ಇಂದಿಗೂ ಪ್ರಸ್ತುತವಾಗಿವೆ ಎಂದು ನುಡಿದರು.
ಪ್ರಕಾಶಕರು, ಸಮಾಜ ಸೇವಕ ಶ್ರೀನಿವಾಸ ಬೋಚಗೇರಿ ಮಾತನಾಡಿ, ಓದು ಬರಹಗಳು ಮನುಷ್ಯನ ಜೀವನದ ನಿಜವಾದ ಸಂಪತ್ತುಗಳಾಗಿವೆ ಎಂದರು.
ಪುಸ್ತಕದ ಸಂಪಾದಕಿ ಅನಿತಾ ಜಡಿ ಮಾತನಾಡಿ, ಪುಸ್ತಕದಲ್ಲಿ ಒಳ್ಳೆಯ ಲೇಖನಗಳು, ಕವಿತೆಗಳು, ಗಣೇಶೋತ್ಸವದ ಮಾಹಿತಿಗಳು, ಸಮಗ್ರ ವಿವರಗಳಿವೆ. ಒಳ್ಳೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತ ಮಾರ್ಗದರ್ಶನ ನೀಡುವ ಪುಸ್ತಕವಾಗಿದೆ ಎಂದು ನುಡಿದರು.

ಶಾಂತರಾಜ ಪೋಳ, ಅಲ್ತಾಫ ಕಿತ್ತೂರ, ಎಸ್​.ಎಸ್​. ಕಮಡೊಳ್ಳಿಶೆಟ್ಟರ ಮಾತನಾಡಿ, ಗಣೇಶೋತ್ಸವ ಆಚರಣೆಯೊಂದಿಗೆ ಸಾಮಾಜಿಕ ಕಳಕಳಿ ಮೆರೆಯುವುದು, ಸಾಹಿತ್ಯ ಲೋಕಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಅಕ್ಕಮ್ಮ ಕಂಬಳಿ, ಶಿವಕುಮಾರ ಹಿರೇಮಠ, ಐ.ಬಿ. ಬೀರೊಳ್ಳಿ, ಆನಂದ ಹಿಪ್ಪರಗಿ, ಸಂತೋಷ್​ ಕಾಟವೆ, ರಾಜು ಕರಕಣ್ಣವರ, ಹಿರಿಯ ಕಲಾವಿದರಾದ ಎಸ್​.ಎಂ. ಅಂಗಡಿ, ಈರಣ್ಣ ಪಾಳೇದ, ಅನಿಲ ಕವಿಶೆಟ್ಟಿ, ಎಂ.ಎಂ. ಡಂಬಳ, ಅಕ್ಕಮ್ಮ ಅಂದೇಲಿಮಠ, ಡಾ. ಮಂಜುಳಾ ಹತ್ತಿಮತ್ತೂರ, ವಿಜಯಲಕ್ಷ್ಮಿ ಏಕಬೋಟೆ, ಸುಧೀಂದ್ರ ಜಹಾಗಿರದಾರ, ಪಾಂಡುರಂಗ ಮುಸಳೆ ಉಪಸ್ಥಿತರಿದ್ದರು.
ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸ್ವಾಗತಿಸಿದರು. ಅನಿಲ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸರೋಜಾ ಛಬ್ಬಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net