1.60 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

Ganja seized
ಗಾಂಜಾ ಜಪ್ತಿ
Published on: 

ಹುಬ್ಬಳ್ಳಿ: ಇಲ್ಲಿಯ ಕಾರವಾರ ರಸ್ತೆಯ ತಿಮ್ಮಸಾಗರಕ್ಕೆ ಹೋಗುವ ರಸ್ತೆ ಪಕ್ಕದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡಿಹಾಳ ಕ್ರಾಸ್ ಬಾಣಗಿತಿಯ ತೇಜೇಶ ರಾಮಗೇರಿ (26), ಆನಂದ ನಗರದ ಜೋಸೆಫ್ ದಾಸ್ (26) ಎಂಬುವವರು, ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1.60 ಲಕ್ಷ ರೂ. ಮೌಲ್ಯದ 3213 ಗ್ರಾಂ ಗಾಂಜಾ, 2 ಮೊಬೈಲ್ ಫೋನ್, ಬ್ಯಾಂಗ್, 1050 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net