ಭದ್ರಾ ಜಲಾಶಯ ಹಾಗೂ ಸೂಳೆಕೆರೆಯಿಂದ ನಾಲೆಗಳಿಗೆ ನೀರು

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್ ಅನಿಸಿಕೆ
Felicitation
ರೈತರ ಹೋರಾಟ ಯಶಸ್ವಿಯಾದ ಕಾರಣ ನೇತೃತ್ವ ವಹಿಸಿದ್ದ ತೇಜಸ್ವಿ ಪಟೇಲ್ ಅವರಿಗೆ ರೈತ ಸಂಘದಿಂದ ಸನ್ಮಾನಿಸಲಾಯಿತು.Felicitation
Published on: 

ಬಸವಾಪಟ್ಟಣ: ಬೆಳೆ ರಕ್ಷಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಭದ್ರಾ ಜಲಾಶಯ ಹಾಗೂ ಸೂಳೆಕೆರೆಯಿಂದ ನಾಲೆಗಳಿಗೆ 15 ದಿನಗಳ ಕಾಲ ಹರಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಉಪಾಧ್ಯಕ್ಷ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ನಡೆದ ಹೋರಾಟ ಯಶಸ್ವಿಯಾದ ಪ್ರಯುಕ್ತ ಬೆಳಲಗೆರೆ ಗ್ರಾಮದ ಶ್ರೀ ರೇಣುಕಾಚಾರ್ಯ ಗದ್ದುಗೆ ಮಠದಲ್ಲಿ ಶನಿವಾರ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಸ್ವಿ ಪಟೇಲ್, ನಾಲೆಗಳಿಗೆ ನೀರು ಬಂದ ನಂತರ ಯಾವ ಊರಿಗೆ ಹೋದರೂ ಗೌಡ್ರೇ, ನಿಮ್ಮಿಂದ ನೀರು ಬಂತು ಎಂದು ಹೇಳುತ್ತಾರೆ. ಆದರೆ ನೀರು ಹರಿದಿರುವುದು ನನ್ನಿಂದ ಅಲ್ಲ, ರೈತಪರ ಹೋರಾಟದ ಫಲ ಎಂದು ಹೇಳಿದರು.

ಹೋರಾಟವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಲು ಯಾರಾದರೂ ನೇತೃತ್ವ ಯಾರಾದರೂ ವಹಿಸಿಕೊಳ್ಳಬೇಕು. ಈ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದೇನೆ. ನೀವೆಲ್ಲ ಅಷ್ಟೊಂದು ಸಂಖ್ಯೆಯಲ್ಲಿ ಸೇರದಿದ್ದರೆ ಸರ್ಕಾರ ಮಣಿಯುತ್ತಿರಲಿಲ್ಲ. ಹೋರಾಟದ ಶ್ರೇಯಸ್ಸು ರೈತ ಸಮೂಹಕ್ಕೆ ಸಲ್ಲಬೇಕು ಎಂದರು. ಹೋರಾಟ ಮಾಡಿದ ತಕ್ಷಣ ಯಶಸ್ಸು ಎಂದು ಹೇಳಲು ಸಾಧ್ಯವಿಲ್ಲ. ನೀರು ರೈತರ ಜಮೀನು ತಲುಪಿದಾಗ ಮಾತ್ರ ಹೋರಾಟದ ಲ ಸಿಗುತ್ತದೆ ಎಂದರು. ರೈತ ಮುಖಂಡರಾದ ಬಿ.ಎಚ್. ನಾಗರಾಜಪ್ಪ, ಕಾರಿಗನೂರು ಗಂಗಾಧರಪ್ಪ ವಾತನಾಡಿದರು. ಎಚ್. ರುದ್ರಮುನಿಯಪ್ಪ, ಬಿ.ಎಂ. ಹಾಲೇಶಪ್ಪ, ಎಚ್. ಗಣೇಶಪ್ಪ, ಆಖಾಡದ ಲಕ್ಷ್ಮಪ್ಪ, ಎಸ್. ಮಹಾಸ್ವಾಮಿ, ಎಸ್.ಜಿ. ಮುರುಗೇಶಪ್ಪ, ಡಿ.ಎಸ್. ಬಸವರಾಜ, ಎಂ.ಸಿ. ಶಿವಕುವಾರ್, ಜಿ.ಎಸ್. ವಿಜಯಕುವಾರ್, ಬಿ.ಜೆ. ನಾಗರಾಜ, ಜಿ. ಲೋಕೇಶಪ್ಪ, ದೇವೇಂದ್ರಪ್ಪ, ಜಿ.ಎಸ್., ಬೆನಕೇಶಪ್ಪ, ಪಿ.ಜಿ. ಚನ್ನಬಸಪ್ಪ ಇತರರು ಇದ್ದರು.

ಬಹಳ ಜನ ಇದ್ದಾರೆ!

ಭದ್ರಾ ಜಲಾಶಯ ಹಾಗೂ ಸೂಳೆಕೆರೆಯಿಂದ ನಾಲೆಗೆ ನೀರು ಹರಿಸಲು ನಾವೇ ಕಾರಣ ಎಂದು ಹೋರಾಟದ ಯಶಸ್ಸು ಪಡೆಯಲು ಬಹಳ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಅವರು ಹೇಳಿದ ಪ್ರವಾಣದಲ್ಲಿ ನೀರು ಹರಿದಿದ್ದರೆ ಕಾಲುವೆಯೇ ಒಡೆದು ಹೋಗುತ್ತಿತ್ತು ಎಂದರು. ನಾಲೆಗೆ ನೀರು ಬಿಡಿಸಿದವರ ಸಂಖ್ಯೆ ಹೆಚ್ಚಾ ಗಿದೆ ಹಾಗೆಯೇ ಜಮೀನುಗಳಿಗೆ ನೀರು ತಲುಪದ ರೈತರ ಸಂಖ್ಯೆಯೂ ಸಾಕಷ್ಟಿದೆ. ನೀರು ಬಿಡಿಸಿದವರು ನಾವು ಎಂದು ಹೇಳಿಕೊಳ್ಳುವವರು ಫೋಟೊ ತೆಗೆದುಕೊಂಡು ಪ್ರಚಾರ ವಾಡಿಕೊಳ್ಳುತ್ತಿದ್ದಾರೆ. ನೀರು ಬರದ ರೈತರು ನನಗೆ ಕರೆ ವಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಅಸವಾಧಾನ ವ್ಯಕ್ತಪಡಿಸಿದರು.

ತಾರತಮ್ಯವಿಲ್ಲ

ಕೆಲವರು ಭತ್ತ ಬೆಳೆಗಾರರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ವಾಡಿದ್ದಾರೆ. ಹರಿಹರ ತಾಲೂಕಿನಿಂದ ಭತ್ತ ಬೆಳೆಗಾರರು ಕರೆ ವಾಡಿ 15 ದಿನ ನೀರು ಬಿಟ್ಟಿದ್ದೀರಿ, ಮತ್ತೆ ವಿಸ್ತರಣೆ ವಾಡುತ್ತೀರಾ? ನಾವೇನು ಭತ್ತ ಬೆಳೆಯಬಾರದಾ? ಎಂದು ಪ್ರಶ್ನಿಸಿದ್ದಾರೆ. ಆದರೆ ನಮ್ಮ ಹೋರಾಟ ಕಬ್ಬು, ಭತ್ತ, ಅಡಿಕೆ ಎಂದು ಯಾವುದೇ ಬೆಳೆಯ ಪರವಾಗಿರಲಿಲ್ಲ ಎಂದು ತೇಜಸ್ವಿ ಪಟೇಲ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net