ಬಸವಾಪಟ್ಟಣದಲ್ಲಿ ಅದ್ದೂರಿ ಶೋಭಾಯಾತ್ರೆ

ಕೇಸರಿಮಯ ಪಟ್ಟಣ , ಬಿಗಿ ಪೊಲೀಸ್ ಬಂದೋಬಸ್ತ್
Procession
ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಜಿ. ಸಚಿನ್ ಗಣೇಶ ವಿಸರ್ಜನಾ ಶೋಭಾಯಾತ್ರೆಗೆ ಚಾಲನೆ ನೀಡಿದರು.Procession
Published on: 

ಬಸವಾಪಟ್ಟಣ: ಪಟ್ಟಣದ ಕೆನರಾ ಬ್ಯಾಂಕ್ ಎದುರಿನ ಮೈದಾನದಲ್ಲಿ ವೀರ ಸಾವರ್ಕರ್ ಸಮಿತಿ ಪ್ರತಿಷ್ಠಾಪಿಸಿದ್ದ ಐದನೇ ವರ್ಷದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಶೋಭಾಯಾತ್ರೆ ಸೋಮವಾರ ಅದ್ದೂರಿಯಾಗಿ ನೆರವೇರಿತು. ಮಹಾರಾಷ್ಟ್ರದ ಪ್ರಸಿದ್ಧ ಡೋಲು ತಂಡದ ಕಲಾವಿದರು, ನಂದಿಕೋಲು, ವೀರಗಾಸೆ ಕುಣಿತ, ಆಕರ್ಷಕ ಡ್ರಮ್ಸ್ ಹಾಗೂ ಡಿಜೆಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು.

ಡಿ.ಜೆ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ಭಕ್ತರ ಉತ್ಸಾಹದಿಂದ ಶೋಭಾಯಾತ್ರೆ ಕಳೆಗಟ್ಟಿತ್ತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಿ. ಸಚಿನ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ದಿಬ್ಬದ ಹಳ್ಳಿಯವರ ಬೀದಿ, ಗದ್ದಿಗೆಯ ಮಠದ ಬೀದಿ, ರಾಮಮಂದಿರದ ಬೀದಿ , ದಾದಾಪೀರ್ ಸ್ಟೋರ್ ಸರ್ಕಲ್ ವಾರ್ಗವಾಗಿ ಯಾತ್ರೆ ಮುಂದುವರಿಯಿತು.

ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಬಸವಾಪಟ್ಟಣ ಕೇಸರಿ ಬಂಟಿಂಗ್ಸ್ ಹಾಗೂ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿತ್ತು. ಪಟ್ಟಣದ ಪ್ರಮುಖ ಬೀದಿಗಳು ಕೇಸರಿಮಯವಾಗಿ ಕಂಗೊಳಿಸುತ್ತಿದ್ದವು. ವಾರ್ಗದುದ್ದಕ್ಕೂ ಸಾರ್ವಜನಿಕರು ಶೋಭಾಯಾತ್ರೆಯನ್ನು ವೀಕ್ಷಿಸಿ ಸಂಭ್ರಮಿಸಿದರು. ಬಿ.ಜಿ.ಯೋಗೇಶ್, ಚಿರಡೋಣಿ ಅಣ್ಣಪ್ಪ, ಹೊನ್ನಪ್ಪ, ಬಸವನಗೌಡ, ಡಿ.ಆರ್.ಹಾಲೇಶ್, ಎಸ್.ಎಂ.ರುದ್ರೇಶ್, ಮಂಜುನಾಥ ಬಡಿಗೇರ, ಮಾರುತಿ, ಫಕೀರಪ್ಪ, ನಿಲೋಗಲ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಶೋಭಾಯಾತ್ರೆ ನೇತೃತ್ವ ವಹಿಸಿದ್ದರು.

ಪೊಲೀಸ್ ಬಿಗಿ ಬಂದೋಬಸ್ತ್

ಶೋಭಾಯಾತ್ರೆ ಯಾವುದೇ ಅಹಿತಕರ ಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯುವಂತೆ ಬಸವಾಪಟ್ಟಣ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗುವಂತೆ ನೋಡಿಕೊಂಡರು.

ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸವಾಜದಲ್ಲಿ ಒಗ್ಗಟ್ಟು, ಸಹೋದರತ್ವ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸುವ ಉತ್ಸವವಾಗಿದೆ. ಯುವಜನತೆ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವ ಅರಿತು ಶಿಸ್ತುಬದ್ಧವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.
ಬಿ.ಜಿ. ಸಚಿನ್, ಅಧ್ಯಕ್ಷ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net