ರೈತರಿಂದ ಮಠಾಧೀಶರ ಭೇಟಿ

ಕೆರೆಗಳಿಗೆ ನೀರು ಹರಿಸುವ ಹೋರಾಟಕ್ಕೆ ಬೆಂಬಲ ಕೋರಿಕೆ
meeting
ಕೆರೆಗಳಿಗೆ ನದಿ ನೀರು ತುಂಬಿಸ ಬೇಕೆಂಬ ಹೋರಾಟಕ್ಕೆ ಬೆಂಬಲ, ವಾರ್ಗದರ್ಶನ ಕೋರಿ ರೈತ ಮುಖಂಡರು ನಿರಂಜನಾನಂದ ಶ್ರೀಗಳನ್ನು ರೈತ ಮುಖಂಡರ ನಿಯೋಗ ಭೇಟಿ ಮಾಡಿತು.meeting
Published on: 

ಹರಿಹರ: ತುಂಗಭದ್ರಾ ನದಿಯಿಂದ ಎಲ್ಲ ಕೆರೆಗಳಿಗೆ ನೀರು ಹರಿಸುವ ಹೋರಾಟಕ್ಕೆ ತಾಲೂಕಿನ ಎಲ್ಲ ಮಠಾಧೀಶರ ವಾರ್ಗದರ್ಶನ ಪಡೆಯಬೇಕು ಎಂಬ ಸಭೆಯ ನಿರ್ಣಯದಂತೆ ಶುಕ್ರವಾರ ರೈತ ಮುಖಂಡರು ತಾಲೂಕಿನ ವಿವಿಧ ಮಠಾಧೀಶರನ್ನು ಭೇಟಿ ವಾಡಿದರು.

ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿದ ರೈತ ಮುಖಂಡರು ಭದ್ರಾ ಡ್ಯಾಂ ನಿಂದ ಈಗಾಗಲೇ ಮಳೆಗಾಲ ಸಮಯದ ನೀರನ್ನು ಹರಿಸುತ್ತಿದ್ದರೂ ನಾಲೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಲ್ಲ. ಇನ್ನು ಬೇಸಿಗೆ ಸಮಯಕ್ಕೆ ನೀರು ಸಿಗುವ ಭರವಸೆ ಕಳೆದುಹೋಗಿದೆ. ಭದ್ರಾ ಕಾಲುವೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ನೀರು ಹರಿಸುತ್ತಿರುವುದರಿಂದ ಭದ್ರಾ ಅಚ್ಚುಕಟ್ಟಿನ ಪ್ರದೇಶಕ್ಕೆ ನೀರು ಮರೀಚಿಕೆಯಾಗಲಿದೆ. ತುಂಗಭದ್ರಾ ನದಿಯಿಂದ ತಾಲೂಕಿನಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭವಾದರೆ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಶಮನವಾಗಲಿದೆ ಎಂದು ಹೋರಾಟಕ್ಕೆ ಸಹಕಾರ, ವಾರ್ಗದರ್ಶನ ಬೇಕು ಎಂದು ಮನವಿ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ನಿರಂಜನಾನಂದ ಶ್ರೀಗಳು, ನಿಮ್ಮ ಹೋರಾಟದ ವಿಷಯಕ್ಕೆ ಹೆಚ್ಚಿನ ಮಹತ್ವವಿದೆ, ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ, ಕೂಡಲೇ ತಾಲೂಕಿನ ಎಲ್ಲ ಶ್ರೀಗಳು ಹಾಗೂ ರಾಜಕೀಯ ಮುಖಂಡರ ಸಭೆ ಆಯೋಜಿಸಿ, ನಾವು ಸಹ ಬರುತ್ತೇವೆ ಎಂದು ಭರವಸೆ ನೀಡಿದರು.

ಯಲವಟ್ಟಿ ಯೋಗಾನಂದ ಶ್ರೀ, ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠ ನಂದಿಗುಡಿ ಮಠದ ಗುರುಸಿದ್ದರಾಮೇಶ್ವರ ಶ್ರೀಗಳ ಬಳಿ ರೈತರ ನಿಯೋಗ ಭೇಟಿ ವಾಡಿ ಹೋರಾಟಕ್ಕೆ ಬೆಂಬಲ ಹಾಗೂ ಸಹಕಾರ ಕೋರಿದರು. ರೈತರ ಮನವಿ ಆಲಿಸಿದ ಶ್ರೀಗಳು ಪಕ್ಷಾತೀತ ಹಾಗೂ ಜಾತ್ಯತೀತ ಹೋರಾಟ ವಾಡಿ, ನಾವು ನಿಮ್ಮೊಂದಿಗಿರುತ್ತೇವೆ ಎಂಬ ಭರವಸೆ ನೀಡಿದ್ದಾರೆ. ನಂತರದ ದಿನಗಳಲ್ಲಿ ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ, ಹೊಸಹಳ್ಳಿ ವೇಮನ ಮಠದ ಶ್ರೀ ಹಾಗೂ ಷಂಷಿಪುರದ ನಾಲ್ವಡಿ ಶಾಂತಲಿಂಗ ಶ್ರೀಗಳನ್ನು ಭೇಟಿ ವಾಡಿ ಬೆಂಬಲ ಕೋರಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ವಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಪೂಜಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ. ಕುವಾರ್, ಬಿಜೆಪಿ ಪಕ್ಷದ ಗ್ರಾವಾಂತರ ಅಧ್ಯಕ್ಷ ಲಿಂಗರಾಜ್ ಹಿಂಡಸಟ್ಟ, ಬೆಳ್ಳೂಡಿ ಕೆ.ವಿ. ರುದ್ರೇಶ್ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.

ಪೂರ್ವಭಾವಿ ಸಭೆ

ಅ. 9ರ ಶುಕ್ರವಾರ ಬೆಳಗ್ಗೆ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠದಲ್ಲಿ ತಾಲೂಕಿನ ಎಲ್ಲ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ರೈತರ ಸಭೆ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net