ದಾವಣಗೆರೆ: ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ 10 ಲಕ್ಷ ರೂ.ವರೆಗೆ ಜನರು ಪಡೆದಿರುವ ಸಾಲ ಮನ್ನಾ ಮಾಡುವುದಾಗಿ ಹೇಳಿ ಬೆಂಗಳೂರು ಮೂಲದ ಸಿ.ಎಂ. ಶಬಾಜ್‌ಖಾನ್ ವಂಚನೆ ಮಾಡುತ್ತಿರುವುದಾಗಿ ಆರೋಪಿಸಿರುವ ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘ ಟ್ರಸ್ಟ್‌ನ ಸಂಸ್ಥಾಪಕ ಮೊಹಮ್ಮದ್ ವಾಸಿಂ ಖಾದ್ರಿ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಇಲಾಖೆಗೆ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.