

ದಾವಣಗೆರೆ: ರೈತರು ಇನ್ನು ಮುಂದೆ ಮನೆಯಲ್ಲೇ ಕುಳಿತು ತಮಗೆ ಅಗತ್ಯವಾದ ರಸಗೊಬ್ಬರ ಖರೀದಿ ಮಾಡಬಹುದು. ಕೇಂದ್ರ ಸರ್ಕಾರ ರ್ಟಿಲೈಸರ್ಸ್ ಸೇಲ್ಸ್ ಅಫ್ಲಿಕೇಷನ್ ಸಿಸ್ಟಮ್ ಜಾರಿಗೊಳಿಸಿದ್ದು, ರ್ಟಿಲೈಸರ್ ಬುಕ್ಕಿಂಗ್ ಆ್ಯಪ್ ಫಾರ್ ಫಾರ್ಮರ್ಸ್ ರೂಪಿಸಿದೆ. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಅಡುಗೆ ಅನಿಲ ಸಿಲಿಂಡರ್ಬುಕ್ಕಿಂಗ್ ಮಾದರಿಯಲ್ಲೇ ರಸಗೊಬ್ಬರ ಖರೀದಿಸಬಹುದು.
ಈ ನೂತನ ಡಿಜಿಟಲ್ ವ್ಯವಸ್ಥೆಯ ರಸಗೊಬ್ಬರ ಮಾರಾಟ ಚೌಕಟ್ಟನ್ನು (ಎಫ್ಎಫ್ಎಸ್) ಡಿ.1ರಿಂದ ದಾವಣಗೆರೆ ಸೇರಿದಂತೆ ಒಟ್ಟು 15 ಜಿಲ್ಲೆಗಳಲ್ಲಿ 2ನೇ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಲೋಪಗಳಿಲ್ಲದಂತೆ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ, ಕಾಳಸಂತೆ ಮಾರಾಟ ತಡೆ ಹಾಗೂ ಅರ್ಹ ನೈಜ ರೈತರಿಗೆ ಸಬ್ಸಿಡಿ ದರದಲ್ಲಿ ಸಕಾಲಕ್ಕೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಎಫ್ಎಫ್ಎಸ್ನ್ನು ಮೊಬೈಲ್ ಆ್ಯಪ್ ಮೂಲಕ ಪರಿಚಯಿಸಿದೆ. ದೇಶಾದ್ಯಂತ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗೊಬ್ಬರಕ್ಕೆ ಇರುವ ಬೇಡಿಕೆ ಪ್ರಮಾಣ ಎಷ್ಟು ಎಂಬುದನ್ನು ಈ ಮೊಬೈಲ್ ಆಪ್ ಮೂಲಕ ತಿಳಿಯಲು ಸರ್ಕಾರಗಳಿಗೆ ಸಹಕಾರಿಯಾಗಿರಲಿದೆ. ಇದರಿಂದ ಯೋಜಿತ ಬೇಡಿಕೆಯನ್ವಯ ದೇಶಾದ್ಯಂತ ಗೊಬ್ಬರದ ಸುಸ್ಥಿರ ಪೂರೈಕೆ ಸಾಧ್ಯವಾಗಲಿದ್ದು, ಆಹಾರ ಭದ್ರತೆಗೂ ಇದು ನೆರವಾಗಲಿದೆ. ಗೊಬ್ಬರದ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲು ಅನುವಾಗಲಿದೆ.
ಪ್ರತಿ ವಹಿವಾಟು ಡಿಜಿಟಲೀಕರಣ ರೂಪದಲ್ಲಿದ್ದು, ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕ ಸಿಗಲಿದೆ. ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಕಡಿವಾಣ ಹಾಕಬಹುದಾಗಿದೆ. ಈ ವ್ಯವಸ್ಥೆಯಡಿ ದಾವಣಗೆರೆ ಜಿಲ್ಲೆಯ ರೈತ ಬಾಂಧವರು ತಮ್ಮ ಮೊಬೈಲ್ ಫೋನ್ ಮೂಲಕವೇ ಯೂರಿಯಾ, ಡಿಎಪಿ, ಎಂಒಪಿ, ಎನ್ಪಿಕೆ ಸೇರಿದಂತೆ ಅಗತ್ಯ ರಸಗೊಬ್ಬರಗಳನ್ನು ಮುಂಗಡವಾಗಿ ಕಾಯ್ದಿರಿಸಿ ವಿಶಿಷ್ಟ ಕ್ಯೂ ಆರ್ ಕೋಡ್ ಬಳಸಿ ಖರೀದಿಸಬಹುದು. ಜಿಲ್ಲೆಯ ಎಲ್ಲ ರೈತರು ಎಫ್ಎಫ್ಎಸ್ ಮೊಬೈಲ್ ಆಪ್ ಕುರಿತು ಮಾಹಿತಿ ಪಡೆದು, ಅಗತ್ಯ ದಾಖಲೆ ಸಿದ್ದಪಡಿಸಿಕೊಂಡು ಡಿಜಿಟಲ್ ರಸಗೊಬ್ಬರ ಖರೀದಿ ವ್ಯವಸ್ಥೆಯ ಪ್ರಯೋಜನ ಪಡೆಯಬಹುದು.
ರೈತರು ಆಂಡ್ರಾಯ್ಡಾ ೆನ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎ್ಐಡಿ, ಹಿಡುವಳಿ ವಿಸ್ತೀರ್ಣ ಇತ್ಯಾದಿ ಮಾಹಿತಿ ಲಭ್ಯವಾಗಲಿದೆ. ಮೊಬೈಲ್ಗೆ ಒಟಿಪಿ ಬಂದ ಬಳಿಕ 2-3 ದಿನಗಳ ಅವಧಿಯೊಳಗೆ ಗೊಬ್ಬರ ಖರೀದಿಸಲು ಸಮಯವಿರುತ್ತದೆ. ಮೊಬೈಲ್ಗೆ ಬುಕ್ಕಿಂಗ್ ನಂತರ ಬರುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿ ಮಾಲೀಕ ಸ್ಕಾೃನ್ ಮಾಡಿ ಗೊಬ್ಬರ ಕೊಡುತ್ತಾರೆ. ಒಂದು ವೇಳೆ ರೈತರಿಗೆ ಖುದ್ದಾಗಿ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ ಆಥರೈಸೇಷನ್ ಕೊಡಬಹುದು. ಬುಕ್ಕಿಂಗ್ ಮಾಡಿದ ರೈತನ ಪರ ಬರುವ ವ್ಯಕ್ತಿ, ಒಟಿಪಿ, ಕ್ಯೂಆರ್ ಕೋಡ್ ಹಾಗೂ ತನ್ನ ಆಧಾರ್ ಕಾರ್ಡ್ನ್ನು ಅಂಗಡಿಗೆ ತೆಗೆದುಕೊಂಡು ಹೋಗಬೇಕು. ಹಣವನ್ನು ಯುಪಿಐ ಮೂಲಕ ಪಾವತಿಸುವ ಅವಕಾಶವೂ ಇದೆ. ದೇವರ ಜಮೀನು, ಬಗರ್ಹುಕುಂ ಸಾಗುವಳಿದಾರರು, ಮತ್ತಿತರ ರೈತರಿಗೂ ಆ್ಯಪ್ ಮೂಲಕ ಖರೀದಿಸಲು ಅನುಕೂಲವಿದೆ ಎನ್ನುತ್ತಾರೆ ಅಧಿಕಾರಿಗಳು.
ಗೊಬ್ಬರ ಸಿಗುವುದೊ ಇಲ್ಲವೋ ಎಂಬ ಧಾವಂತದಿಂದ ಅಂಗಡಿಗೆ ಹೋಗುವುದು ತಪ್ಪಲಿದೆ.
ಬುಕ್ಕಿಂಗ್ ಮಾಡಿದಲ್ಲಿ ಗೊಬ್ಬರ ಮೀಸಲು ಇರುತ್ತದೆ.
ಉದ್ದನೆ ಸರತಿ ಸಾಲಿನಲ್ಲಿ ನಿಲ್ಲುವುದು, ಸಮಯ ವ್ಯರ್ಥ, ಅಂಗಡಿಯಿಂದ ಅಂಗಡಿಗೆ ಅಲೆದಾಟ ತಪ್ಪಲಿದೆ.
ಆ್ಯಪ್ ಮೂಲಕ ಸಮೀಪದ ಗೊಬ್ಬರದ ಅಂಗಡಿಯಲ್ಲಿ ಖರೀದಿಸಬಹುದು.
ಆಧಾರ್ ಆಧರಿತ ಕೋಟಾದ ಗೊಬ್ಬರ ಅನ್ಯರ ಪಾಲಾಗುವುದಿಲ್ಲ
ಗೊಬ್ಬರದ ಬೇಡಿಕೆ ಎಷ್ಟು ಎಂಬುದು ಗೊತ್ತಾಗಲಿದ್ದು, ದಾಸ್ತಾನಿಗೆ ಅನುಕೂಲ
ಪ್ರತಿ ವಹಿವಾಟು ಡಿಜಿಲೀಕರಣ ರೂಪದಲ್ಲಿದ್ದು, ಕಾಗದದ ದಾಖಲೆಗಳಿರುವುದಿಲ್ಲ.
ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕ
ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಬ್ರೇಕ್
ಸರ್ಕಾರಗಳು ಅಗತ್ಯ ಸಮಯದಲ್ಲಿ ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗೊಬ್ಬರದ ಬೇಡಿಕೆ ತಿಳಿಯಬಹುದು
ಯೋಜಿತ ಬೇಡಿಕೆಯೊಂದಿಗೆ ದೇಶಾದ್ಯಂತ ಗೊಬ್ಬರ ಸ್ಥಿರ ಪೂರೈಕೆ ಸಾಧ್ಯವಾಗಲಿದ್ದು, ಉತ್ತಮ ಆಹಾರ ಭದ್ರತೆ ನೆರವಾಗಲಿದೆ.