168 ಸಜೀವ ನಾಡಬಾಂಬ್ ಪತ್ತೆ

ಸೆರೆ ಸಿಕ್ಕ ಓರ್ವ ಆರೋಪಿ ಬಂಧನ, ನಾಲ್ವರು ಪರಾರಿ
Arrest
ಬೇಟೆ ಯಾಡಲು ಇಟ್ಟಿದ್ದ ಸಜೀವ ನಾಡಬಾಂಬ್ ಜಪ್ತಿ ಮಾಡಿರುವುದು.Arrest
Published on: 

ಚನ್ನಗಿರಿ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ರೂಪಿಸಿದ್ದ ಸಂಚನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲಗೊಳಿಸಿದ್ದು, ಈ ಉದ್ದೇಶಕ್ಕೆ ಇಟ್ಟಿದ್ದ 18 ಸಜೀವ ನಾಡಬಾಂಬ್ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇತರ ನಾಲ್ವರು ಪರಾರಿಯಾಗಿದ್ದಾರೆ. ಅಜ್ಜಂಪುರ ತಾಲೂಕು ಅತ್ತಘಟ್ಟ ಗ್ರಾಮದ ಗಿರಿಯಪ್ಪ (42) ಬಂಧಿತ ಅರೋಪಿ.

ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಗಂಗಗೊಂಡನ ಹಳ್ಳಿ ಗ್ರಾಮದ ಹೊರವಲಯದಲ್ಲಿ ಕಾಡುಪ್ರಾಣಿಗಳ ಬೇಟೆ ಯಾಡಲು ಇಟ್ಟಿದ್ದ 168 ಸಜೀವ ನಾಡಬಾಂಬ್ ಇಡಲಾಗಿತ್ತು. ಈ ಸುಳಿವು ಪಡೆದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ 2 ಬೈಕ್ ಹಾಗೂ ಜೀವಂತ 168 ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅರಣ್ಯದ ಅಂಚಿನ ಗ್ರಾಮಗಳ ಬಳಿಗೆ ಕಾಡಿನಲ್ಲಿ ನೀರು ಅಹಾರ ಇರದ ಕಾರಣ ನಾಡಿನ ಕಡೆಗೆ ಬರುವ ಕಾಡು ಪ್ರಾಣಿಗಳನ್ನು ಹಿಡಿಯಲು ಅಜ್ಜಂಪುರ ತಾಲೂಕಿನ ವಿವಿಧ ಗ್ರಾಮಗಳ ಐವರ ತಂಡ ರಾತ್ರಿ ಸಮಯದಲ್ಲಿ ಕಾರ್ಯಾಚರಣೆಗೆ ಇಳಿಯಲು ಯೋಜನೆ ಮಾಡಿಕೊಂಡಿದ್ದರು. ಕಾಡು ಪ್ರಾಣಿಗಳು ಸಿಡಿಮದ್ದು ಸಿಡಿದು ಮೃತಪಟ್ಟ ನಂತರ ಬೆಳಿಗ್ಗೆ ಮೃತ ಪ್ರಾಣಿಗಳು ಚರ್ಮ ಮತ್ತು ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಎಂ ತೆಗ್ಗಿನಮಠ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಕೆ.ಬಿ.ರಾಘವೇಂದ್ರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಅಣ್ಣಾನಾಯ್ಕ, ಗಸ್ತು ಅರಣ್ಯಪಾಲಕ ಬಸವರಾಜ್, ಪೊಲೀಸ್ ಪಾಟೀಲ್, ರಂಗಪ್ಪ, ನಿಂಗಪ್ಪ, ಮಂಜುನಾರ್ಥ, ವಾಹನ ಚಾಲಕ ದೇವರಾಜ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.