ದಾವಣಗೆರೆಯಲ್ಲಿ ಫ್ಲೆಕ್ಸ್ ವಿವಾದ ಸುಖಾಂತ್ಯ

Crime_20250830015144697.jpg
Published on

ದಾವಣಗೆರೆ  : ನಗರದ ಹಳೇ ಮಟ್ಟಿಕಲ್ ಪ್ರದೇಶದಲ್ಲಿ ಗುರುವಾರ ರಾತ್ರಿ ಉಂಟಾಗಿದ್ದ ಫ್ಲೆಕ್ಸ್ ವಿವಾದ ಸುಖಾಂತ್ಯವಾಗಿದೆ.  ಆಕ್ಷೇಪಾರ್ಹ ಎನ್ನಲಾಗಿದ್ದ ಫ್ಲೆಕ್ಸೃ್ ತೆರವುಗೊಳಿಸಿ ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸೃ್ ಅಳವಡಿಸಲಾಗಿದ್ದು ಪರಿಸ್ಥಿತಿ ತಿಳಿಯಾಗಿದೆ.  ವೀರ ಸಾವರ್ಕರ್ ಯುವಕರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮಂಟಪದ ಬಳಿ ಅಳವಡಿಸಿದ್ದ ಫ್ಲೆಕ್ಸ್ ಇನ್ನೊಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಪೊಲೀಸರು ಗುರುವಾರ ರಾತ್ರಿ ಅದನ್ನು ತೆರವುಗೊಳಿಸಲು ಮುಂದಾದರು.  ಆಗ ನೂರಾರು ಹಿಂದು ಯುವಕರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಮುಖಂಡರ ಮನವೊಲಿಸಲು ಬಹಳಷ್ಟು ಪ್ರಯತ್ನಿಸಿದರಾದರೂ ಯುವಕರು ಅಲ್ಲಿಂದ ಕದಲಲಿಲ್ಲ.  ತಡರಾತ್ರಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಪೊಲೀಸರು ಮುಖಂಡರ ಮನವೊಲಿಸಲು ಸಫಲರಾದರು. ಅನಂತರ ಆಕ್ಷೇಪಾರ್ಹ ಎನ್ನಲಾಗಿದ್ದ ಫ್ಲೆಕ್ಸೃ್ ತೆರವುಗೊಳಿಸಿ ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸೃ್ ಅಳವಡಿಸಲಾಯಿತು. ಶುಕ್ರವಾರ ಪರಿಸ್ಥಿತಿ ತಿಳಿಯಾಗಿತ್ತು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net