ರೈತರ ದವಸ-ಧಾನ್ಯ ಕದ್ದ ಖತರ್ನಾಕ್ ಕಳ್ಳರ ಬಂಧನ

Farmers crops seezed
Published on

ಸವಣೂರ: ಸ್ಥಳೀಯ ರೈತರು ಬೆಳೆದ ದವಸ-ದಾನ್ಯ ಹಾಗೂ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಸವಣೂರ ಪೊಲೀಸರ ತಂಡ ಶನಿವಾರ ಬಂಧಿಸಿ, 10 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಮಾ. 8ರಂದು ರಾತ್ರಿ ತಾಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದ ಶಂಕ್ರಪ್ಪ ಬಸವಣ್ಣೆಪ್ಪ ದೊಡ್ಡಮನಿ ಎಂಬುವವರ ಮನೆಯ ಹೊರಗಿನ ಕಟ್ಟೆಯ ಮೇಲಿದ್ದ 18 ಜೋಳದ ಚೀಲ, 2 ಪಾಕೀಟ್ ಗೋಧಿ ಸೇರಿದಂತೆ 40 ಸಾವಿರ ರೂ. ಮೌಲ್ಯದ ಬೆಳೆಗಳು ಕಳವಾಗಿರುವ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹಾವೇರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂಥದ್ದೇ ಘಟನೆ ನಡೆತ್ತಿದ್ದು, ಕಳ್ಳರನ್ನು ಪತ್ತೆ ಮಾಡಲು ಜಿಲ್ಲಾ ಎಸ್​ಪಿ ಅಂಶುಕುಮಾರ, ಹೆಚ್ಚುವರಿ ಎಸ್​ಪಿ ಎಲ್.ವೈ. ಶಿರಕೊಳ, ಶಿಗ್ಗಾಂವಿ ಡಿಎಸ್​ಪಿ ಗುರುಶಾಂತಪ್ಪ.ಕೆ.ವಿ., ಮಾರ್ಗದರ್ಶನದಲ್ಲಿ ಸವಣೂರು ಪೊಲೀಸರ ವಿಶೇಷ ತಂಡ ರಚನೆಗೊಂಡಿತ್ತು.

ಶುಕ್ರವಾರ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸ್ ತಂಡ, ಪ್ರಕರಣದ ಆರೋಪಿಗಳಾದ ಶಿಗ್ಗಾಂವಿಯ ದುರ್ಗಪ್ಪ ಗಾಳೆಪ್ಪ ಕೊರವರ, ಗಂಗಾಧರ ಶಂಕ್ರಪ್ಪ ಕೊಕನೂರ, ಮಾಂತೇಶ ದುರ್ಗಪ್ಪ ಗದಗ, ಹುಬ್ಬಳ್ಳಿಯ ಆನಂದನಗರದ ಅಮಿತ ದಿಲೀಪ ಗೋಸಾವಿ, ಅಭಿಷೇಕ ಪರಶುರಾಮ ನರೇಗಲ್ ಅವರನ್ನು ಬಂಧಿಸಿದೆ.

ಸವಣೂರ, ಬಂಕಾಪುರ, ಶಿಗ್ಗಾಂವ, ಹುಲಗೂರ ಹಾಗೂ ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ರೈತರ ಬೆಳೆ ಹಾಗೂ ಜಾನುವಾರುಗಳನ್ನು ಕಳವು ಮಾಡಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತರಿಂದ ಒಟ್ಟು 54 ಚೀಲ ಜೋಳ, 21 ಚೀಲ ಗೋವಿನ ಜೋಳ, 30 ಚೀಲ ಸಾವಿ, 5 ಚೀಲ ಸೋಯಾಬೀನ್, 5 ಚೀಲ ಕಡ್ಲಿ, 2 ಚೀಲ ಗೋಧಿ ಹಾಗೂ ಕಳ್ಳತನಕ್ಕೆ ಬಳಸಿದ ಬುಲೇರೋ ವಾಹನ ವಶಕ್ಕೆ ಪಡೆದಿದ್ದಾರೆ. ಒಟ್ಟು 9 ಪ್ರಕರಣ ಪತ್ತೆ ಮಾಡಿ ಆರೋಪಿತರಿಂದ 10.27 ಲಕ್ಷ ರೂಪಾಯಿ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಪತ್ತೆ ಮಾಡಿದ ಸವಣೂರ ಪೊಲೀಸ್ ತನಿಖಾ ತಂಡದವರಿಗೆ ಎಸ್​ಪಿ ಅಂಶುಕುಮಾರ ಪ್ರಶಂಶೆ ವ್ಯಕ್ತಪಡಿಸಿ, ಬಹುಮಾನ ಘೊಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net