

ಮಾನ್ವಿ: ಪ್ರತಿಯೊಬ್ಬರೂ ದುಶ್ಚಟಗಳಿಂದಮುಕ್ತರಾಗಿ ಆರೋಗ್ಯಯುತ, ಒತ್ತಡ ರಹಿತ ಜೀವನ ಕಂಡುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ಅಂಗವಾಗಿ ಪಟ್ಟಣದ ಟಿಎಚ್‌ಒ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ, ಮನೋರೋಗ ವಿಭಾಗ ರಿಮ್ಸ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವಾಗಿರಲು ಅವಗುಣಗಳ ಕಡೆ ಮನಸ್ಸನ್ನು ಹರಿಯಬಿಡದೆ ನಿಯಂತ್ರಣದಲ್ಲಿಡಬೇಕು. ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ರಿಮ್ಸ್ ಮಾನಸಿಕ ಆರೋಗ್ಯ ತಜ್ಞ ಮನೋಹರ ಪತ್ತಾರ್ ಮಾತನಾಡಿ, ಪ್ರತಿ ವರ್ಷ ಅ.10ರಂದು ವಿಶ್ವಾದ್ಯಂತ ಮಾನಸಿಕ ಆರೋಗ್ಯದ ಬಗ್ಗೆ ಇರುವ ಹಲವು ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಹಾಗೂ ಉತ್ತಮ ಆರೋಗ್ಯಕ್ಕೆ ಉತ್ತಮ ಮಾನಸಿಕ ಆರೋಗ್ಯ ಹೊಂದುವುದು ಕೂಡ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಆನಂದ ಎಚ್.ಕೊಣ್ಣೂರು, ಟಿಎಚ್‌ಒ ಡಾ.ಶರಣಬಸವರಾಜ, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಉಪಾಧ್ಯಕ್ಷ ಕೊರವಯ್ಯ ನಾಯಕ, ದತ್ತಾತ್ರೇಯ ಹಿರೇಕೊಟ್ನೆಕಲ್, ಮಲ್ಲೇಶ ಮಾಚನೂರು, ಹಿರಿಯ ವಕೀಲರಾದ ಗುಮ್ಮ ಬಸವರಾಜ, ದೇಸಾಯಿ ದೋತರಬಂಡಿ, ಯಲ್ಲಪ್ಪ ಬಾದರದಿನ್ನಿ ಆರೋಗ್ಯ ಶಿಕ್ಷಣಾಧಿಕಾರಿ ಬಾಬು ಚಿನ್ನು ಇತರರಿದ್ದರು.